ಸತ್ಯಾಗ್ರಹ ಸಪ್ತಾಹ, ದಿನ-2: ಮುರಳಿ ಮನೋಹರ ಜೋಷಿ ಬಂಧನ
ಸತ್ಯಾಗ್ರಹ ಸಪ್ತಾಹ, ದಿನ-2: ಮುರಳಿ ಮನೋಹರ ಜೋಷಿ ಬಂಧನ
ಉಮಾಭಾರತಿ ಬಿಡುಗಡೆಯಾದರೆ ವಿಜಯಯಾತ್ರೆಯಾಗಿ ಸತ್ಯಾಗ್ರಹ ಪರಿವರ್ತನೆ
ಬಿಜೆಪಿ ಕರೆ ಕೊಟ್ಟಿರುವ ಜೈಲ್‌ಭರೋ ಚಳವಳಿ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಮುರಳಿ ಮನೋಹರ ಜೋಷಿಯನ್ನು ಬಂಧನದ ನಂತರ ಪೋಲೀಸ್ ಬಸ್‌ನಲ್ಲಿ ಕರೆದೊಯ್ಯಲಾಯಿತು. ಹತ್ತು ವರ್ಷಗಳಷ್ಟು ಹಳೆಯದಾದ ಉಮಾಭಾರತಿ ಪ್ರಕರಣದ ವಿಚಾರಣೆ ಶನಿವಾರ ನಡೆಯಲಿದೆ.
ಉಮಾಭಾರತಿ ಪ್ರಕರಣ ಹಾಗೂ ಸರಕಾರದಿಂದ ವೀರ ಸಾವರ್ಕರ್‌ಗಾದ ಅವಮಾನದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಕರ್ನಾಟಕ್ಕೆ ಆಗಮಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜೈಲ್‌ಭರೋ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ವೇಳೆ ವಾರದೊಳಗೆ ಉಮಾಭಾರತಿ ಬಿಡುಗಡೆಯಾದರೆ ವಿಜಯಯಾತ್ರೆಯಾಗಿ ಇದನ್ನು ಪರಿವರ್ತಿಸುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications