ಉಮಾಭಾರತಿ ಬಂಧಮುಕ್ತಿ ಪ್ರಕರಣ ವಿಚಾರಣೆ ಸೆ.4ಕ್ಕೆ ಮುಂದೂಡಿಕೆ
ಉಮಾಭಾರತಿ ಬಂಧಮುಕ್ತಿ ಪ್ರಕರಣ ವಿಚಾರಣೆ ಸೆ.4ಕ್ಕೆ ಮುಂದೂಡಿಕೆ
ಬೆಂಗಳೂರಿನಲ್ಲಿ ಅಡ್ವಾಣಿ ಸತ್ಯಾಗ್ರಹ, ಬಂಧನ, ಬಿಡುಗಡೆ.
ಹುಬ್ಬಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಉಮಾಭಾರತಿ ಮೇಲಿನ ಮೊಕದ್ದಮೆಗಳ ವಾಪಸಾತಿಗೆ ಸಂಬಂಧಿಸಿದಂತೆ ಸರಕಾರ ಅರ್ಜಿಯನ್ನು ಸಲ್ಲಿಸಿತ್ತು. ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠದ ರದ್ಧತಿ ಹಿನ್ನೆಲೆಯಲ್ಲಿ, ವಕೀಲರು ಮುಷ್ಕರ ಕೈಗೊಂಡಿದ್ದ ಪರಿಣಾಮ ಉಮಾ ಪ್ರಕರಣವನ್ನು ಮಂಗಳವಾರದಿಂದ ಬುಧವಾರಕ್ಕೆ ನ್ಯಾಯಾಲಯ ಮುಂದೂಡಿತ್ತು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಉಮಾಭಾರತಿ ಹಾಗೂ ಮತ್ತಿತರರ ಮೇಲೆ ದಾಖಲಿಸಲಾಗಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯುವ 2002ರ ಸಂಪುಟ ಸಭೆ ನಿರ್ಣಯಕ್ಕೆ ತಾನು ಬದ್ಧ ಎನ್ನುವ ಸರ್ಕಾರದ ಹೊಸ ನಿಲುವು ಕುತೂಹಲ ಕೆರಳಿಸಿದೆ.
ಉಮಾಭಾರತಿಗೆ ಸೆರೆವಾಸದಿಂದ ಮುಕ್ತಿ ದೊರಕುವುದೇ ಎನ್ನ್ನುವ ಪ್ರಶ್ನೆಗೆ ಸೆ.4ರಂದು ಉತ್ತರ ದೊರಕುವ ನಿರೀಕ್ಷೆಯಿದೆ.
ಈ ನಡುವೆ ಉಮಾ ಮೇಲಿನ ಮೊಕದ್ದಮೆ ಕೈಬಿಡುವಂತೆ ಒತ್ತಾಯಿಸಿ ಬಿಜೆಪಿಯ ಸತ್ಯಾಗ್ರಹ ಸಪ್ತಾಹಕ್ಕೆ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಬುಧವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಡ್ವಾಣಿ ಹಾಗೂ ಇತರ ನಾಯಕರನ್ನು ಬಂದಿಸಿದ ಪೊಲೀಸರು, ಆನಂತರ ಬಿಡುಗಡೆ ಮಾಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications