ಧ್ವಜ ರಾಜಕೀಯ : ಬಿಜೆಪಿ ‘ಸತ್ಯಾಗ್ರಹ ಸಪ್ತಾಹ’ ಕ್ಕೆ ಅಡ್ವಾಣಿ ಚಾಲನೆ

ಧ್ವಜ ರಾಜಕೀಯ : ಬಿಜೆಪಿ ‘ಸತ್ಯಾಗ್ರಹ ಸಪ್ತಾಹ’ ಕ್ಕೆ ಅಡ್ವಾಣಿ ಚಾಲನೆ
ಸಮಾರೋಪ ಕಾರ್ಯಕ್ರಮಕ್ಕೆ ವಾಜಪೇಯಿ ಬರುವ ನಿರೀಕ್ಷೆ

ಬೆಂಗಳೂರು : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಮೇಲಿನ ಮೊಕದ್ದಮೆಗಳನ್ನು ವಾಪಸ್ಸು ಪಡೆದು, ಕೂಡಲೆ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಆಯೋಜಿಸಿರುವ ಏಳು ದಿನಗಳ ಸತ್ಯಾಗ್ರಹಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್‌.ಕೆ.ಆಡ್ವಾನಿ ತ್ರಿವರ್ಣ ಧ್ವಜ ಬೀಸುವ ಮೂಲಕ ಬುಧವಾರ ಚಾಲನೆ ನೀಡಿದರು.

ಧ್ವಜಾರೋಹಣ ಪ್ರಕರಣದ ಬಗೆಗೆ 2002 ರಲ್ಲಿ ರಾಜ್ಯ ಸರಕಾರ ಕೈಗೊಂಡಿದ್ದ ನಿರ್ಧಾರದಂತೆ ಮೊಕದ್ದಮೆಗಳನ್ನು ಸರಕಾರ ವಾಪಸ್ಸು ಪಡೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ಉಪಾಧ್ಯಕ್ಷ ಮುಕ್ತರ್‌ ಅಬ್ಬಾಸ್‌ ನಕ್ವಿ, ರಾಜ್ಯಾಧ್ಯಕ್ಷ ಅನಂತಕುಮಾರ್‌ ಮತ್ತಿತರ ನಾಯಕರುಗಳೊಂದಿಗೆ, ಚಂಡಿಗಢ, ಗುಜರಾತ್‌, ಮಧ್ಯಪ್ರದೇಶದಿಂದ ಆಗಮಿಸಿರುವ ಬಿಜೆಪಿ ಕಾರ್ಯಕರ್ತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

1994 ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜರೋಹಣಕ್ಕೆ ಸಂಬಂಧಿಸಿದಂತೆ ಉಮಾಭಾರತಿ ಶಾಂತಿ ಕದಡಿದ್ದಾರೆಂದು ಮೊಕದ್ದಮೆ ದಾಖಲಿಸಲಾಗಿತ್ತು. ನ್ಯಾಯಾಲಯಕ್ಕೆ ಶರಣಾಗುವ ಸಂದರ್ಭದಲ್ಲಿ ಉಮಾ ಭಾರತಿ ತಿರಂಗಿ ಯಾತ್ರೆಯನ್ನು ಘೋಷಿಸಿದ್ದರು. ಸರ್ಕಾರದ ಮೇಲೆ ಒತ್ತಡ ತರಲು ಬಿಜೆಪಿ ನಡೆಸುತ್ತಿರುವ ಸತ್ಯಾಗ್ರಹದಲ್ಲಿ ಪಕ್ಷದ ಹಿರಿಯ ಮುಖಂಡರಾದ ಮುರಳಿ ಮನೋಹರ ಜೋಷಿ, ಸುಷ್ಮಾ ಸ್ವರಾಜ್‌ ಮತ್ತಿತರರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್‌8 ರಂದು ಮುಕ್ತಾಯವಾಗಲಿರುವ ಸತ್ಯಾಗ್ರಹದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಪಾಲ್ಗೊಳ್ಳುವರೆಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಚಾರ ಅಸ್ತವ್ಯಸ್ತ : ಬೆಂಗಳೂರಿನ ಪುರಭವನದ ಬಳಿ ಬುಧವಾರ ಬೆಳಗ್ಗೆ ನಡೆದ ಬಿಜೆಪಿಯ ಸತ್ಯಾಗ್ರಹ ಕಾರ್ಯಕ್ರಮದ ಸಂದರ್ಭದಲ್ಲಿ ಆಸುಪಾಸಿನ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಟ್ರಾಫಿಕ್‌ ಜಾಮ್‌ನಿಂದಾಗಿ ಕಚೇರಿ-ಕಾರ್ಖಾನೆಗಳಿಗೆ ತೆರಳುತ್ತಿದ್ದ ಸಾವಿರಾರು ಮಂದಿ ತೊಂದರೆ ಅನುಭವಿಸಿದರು. ಪೊಲೀಸ್‌ ಇಲಾಖೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+