ಎಲ್.ಕೆ.ಅಡ್ವಾಣಿ, ಯಡಿಯೂರಪ್ಪ , ಅನಂತಕುಮಾರ್, ನಕ್ವಿ ಬಂಧನ
ಎಲ್.ಕೆ.ಅಡ್ವಾಣಿ, ಯಡಿಯೂರಪ್ಪ , ಅನಂತಕುಮಾರ್, ನಕ್ವಿ ಬಂಧನ
ಅನೇಕ ಶಾಸಕರು ಹಾಗೂ ಸಂಸದರಿಗೆ ಬಂಧನದ ರುಚಿ
ಸತ್ಯಾಗ್ರಹದ ನಂತರ ಭಾರೀ ಸಂಖ್ಯೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವಲ್ಪ ಹೊತ್ತಿನ್ಲಲೇ ಅಡ್ವಾಣಿ ಬಂಧನಕ್ಕೊಳಗಾದರು. ವೇದಿಕೆಯಲ್ಲಿ ನುಗ್ಗಿ ಬಂದ ಪೊಲೀಸರು, ಬಂಧನಕ್ಕೊಳಗಾದ ಅಡ್ವಾಣಿ ಅವರನ್ನು ಪೊಲೀಸ್ ಬಸ್‌ನಲ್ಲಿ ಕರೆದೊಯ್ದರು. ಬಿಜೆಪಿ ನಾಯಕರಾದ ಅನಂತಕುಮಾರ್, ಮುಖ್ತರ್ ಅಬ್ಬಾಸ್ ನಕ್ವಿ, ಯಡಿಯೂರಪ್ಪ ಕೂಡ ಬಂಧನಕ್ಕೊಳಗಾಗಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾಗರೂಕತಾ ಕ್ರಮವಾಗಿ ಅಡ್ವಾಣಿ ಅವರನ್ನು ಬಂಧಿಸಲಾಗಿದೆ. ಗುಜರಾತಿನ 20 ಸಂಸದರು ಹಾಗೂ 90 ಶಾಸಕರು ಸೇರಿದಂತೆ 1250 ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ರಾಜ್ಯದ ಶಾಸಕರು-ಸಂಸದರೂ ಸೇರಿದ್ದಾರೆ ಎಂದು ಬೆಂಗಧಿಳೂರು ನಗರ ಪೊಲೀಸ್ ಆಯುಕ್ತ ಮರಿಸ್ವಾಮಿ ತಿಳಿಸಿದ್ದಾರೆ.
ಬಂಧನದ ನಂತರ ಅಡ್ವಾಣಿ ಅವರನ್ನು ಸದಾಶಿವನಗರ ಪೊಲೀಸ್ ಠಾಣೆಗೆ ಒಯ್ಯಲಾಯಿತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications