ಹೈಕೋರ್ಟ್‌ ಪೀಠ ಅನಗತ್ಯ: ಜೈನ್‌ ಪತ್ರಕ್ಕೆ ಉ.ಕ.ದಲ್ಲಿ ಅಸಮಾಧಾನ

ಹೈಕೋರ್ಟ್‌ ಪೀಠ ಅನಗತ್ಯ: ಜೈನ್‌ ಪತ್ರಕ್ಕೆ ಉ.ಕ.ದಲ್ಲಿ ಅಸಮಾಧಾನ
ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯ ಬೇಡಿಕೆಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ಕೆ.ಜೈನ್‌ ತಳ್ಳಿ ಹಾಕಿದ್ದು , ಈ ಭಾಗದ ಬಹುದಿನಗಳ ಕನಸು ಕನಸಾಗಿಯೇ ಮುಂದುವರೆದಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ಕೆ.ಜೈನ್‌ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಉತ್ತರ ಕರ್ನಾಟಕದಲ್ಲಿ ವ್ಯಾಜ್ಯಗಳ ಸಂಖ್ಯೆ ಕಡಿಮೆಯಿರುವ ಕಾರಣ, ಹೈಕೋರ್ಟ್‌ ಪೀಠದ ಆಗತ್ಯವಿಲ್ಲ . ಪೀಠ ಸಾಧ್ಯವಾಗದಿದ್ದರೆ ಸರ್ಕಿಟ್‌ ಬೆಂಚ್‌ಗೆ ಒಪ್ಪಿಗೆ ನೀಡಿ ಎಂದು ಸರಕಾರ ಮನವಿ ಸಲ್ಲಿಸಿದೆ. ಆದರೆ ಸರಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಕಾರಣ, ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲಾಗದೆಂದು ಪತ್ರದಲ್ಲಿ ಮುಖ್ಯ ನ್ಯಾಯಮೂರ್ತಿಜೈನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಪತ್ರವನ್ನು ಬಹಿರಂಗಗೊಳಿಸ ಬೇಕೆಂದು ಬೆಂಗಳೂರು, ಹುಬ್ಬಳ್ಳಿ ,ಧಾರವಾಡದಲ್ಲಿ ಉತ್ತರ ಕರ್ನಾಟಕದ ವಕೀಲರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ, ಸಂಪುಟ ಸಭೆಯಲ್ಲಿ ಪತ್ರದ ಬಗೆಗೆ ಚರ್ಚಿಸಲಾಯಿತು.

ಆದರೆ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಪ್ರಧಾನ ಮಂತ್ರಿಗಳು, ಕೇಂದ್ರ ಕಾನೂನು ಸಚಿವರು ಹಾಗೂ ಸುಪ್ರಿಂಕೋರ್ಟ್‌ ನ್ಯಾಯಮೂರ್ತಿಗಳ ಬಳಿಗೆ ಸರ್ವ ಪಕ್ಷಗಳ ನಿಯೋಗ ತೆರಳಿ, ಮನವೊಲಿಸುವ ಪ್ರಯತ್ನಕ್ಕೆ ಸಂಪುಟ ನಿರ್ಧರಿಸಿದೆ ಎಂದು ಕಂದಾಯ ಸಚಿವ ಎಂ.ಪಿ.ಪ್ರಕಾಶ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅತೃಪ್ತಿ ಪ್ರಕಟ: ಪೀಠ ನಿರಾಕರಣೆ ಬಗೆಗೆ ಉತ್ತರ ಕರ್ನಾಟಕದಲ್ಲಿ ಅಸಮಧಾನ ವ್ಯಕ್ತವಾಗಿದೆ. ಮಹಾರಾಷ್ಟ್ರದಲ್ಲಿ ನಾಲ್ಕು ಪೀಠಗಳಿರುವಾಗ, ಕರ್ನಾಟಕದಲ್ಲಿ ಕೇವಲ ಒಂದು ಸಾಕೆ? ಎಂದು ಪ್ರಶ್ನಿಸಿರುವ ಪತ್ರಕರ್ತ ಡಾ.ಪಾಟೀಲ್‌ ಪುಟ್ಟಪ್ಪ, ಉತ್ತರ ಕರ್ನಾಟಕಕ್ಕೆ ಅನಿವಾರ್ಯವಾಗಿರುವ ಹೈಕೋರ್ಟ್‌ ಪೀಠ ನಿರಾಕರಣೆ ಮೂಲಕ ರಾಜ್ಯ ಒಡೆವ ಕೂಗಿಗೆ ನ್ಯಾಯಮೂರ್ತಿಗಳು ಆಸ್ಪದ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಧಾರವಾಡ ಉತ್ತರ ಲೋಕಸಭೆಯ ಸಂಸದ ಪ್ರಹ್ಲಾದ್‌, ಈ ಹಿಂದೆ ಸ್ಥಳ ಸೂಚಿಸುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದ ಮುಖ್ಯನ್ಯಾಯಮೂರ್ತಿಗಳು ಈಗಪೀಠದ ಅಗತ್ಯವಿಲ್ಲ ಎಂದಿರುವುದು ವಿಚಿತ್ರವಾಗಿದೆ ಎಂದಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+