‘ಉಮಾಯಣ’ಕ್ಕೆ ತಿರುವು ; ಪ್ರಕರಣ ಕೈಬಿಡಲು ಅಡ್ಡಿಯಿಲ್ಲ -ಸರ್ಕಾರ
‘ಉಮಾಯಣ’ಕ್ಕೆ ತಿರುವು ; ಪ್ರಕರಣ ಕೈಬಿಡಲು ಅಡ್ಡಿಯಿಲ್ಲ -ಸರ್ಕಾರ
2002ರ ಸಂಪುಟ ಸಭೆ ತೀರ್ಮಾನಕ್ಕೆ ಬದ್ಧ
ಉಮಾ ಭಾರತಿ ವಿರುದ್ಧದ ಎಲ್ಲ ಪ್ರಕರಣಗಳನ್ನು ಕೈಬಿಡಲು 2002 ದಲ್ಲಿ ನಡೆದ ಸಂಪುಟ ಸಭೆಯ ತೀರ್ಮಾನಕ್ಕೆ ತನ್ನ ವಿರೋಧವೇನೂ ಇಲ್ಲ ಎಂದು ಸೋಮವಾರ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತು. ಸರ್ಕಾರದ ಅಧಿಕೃತ ಹೇಳಿಕೆಯನ್ನು ಆಲಿಸಿದ ನ್ಯಾಯಪೀಠ- ಪ್ರಕರಣ ಕೈಬಿಡುವುದನ್ನು ಪರಿಶೀಲಿಸುವಂತೆ ಹುಬ್ಬಳ್ಳಿಯ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ರಿಗೆ ಸೂಚಿಸಿತು. ಮುಖ್ಯ ನ್ಯಾಯಮೂರ್ತಿ ಎನ್.ಕೆ.ಜೈನ್ ಮತ್ತು ನ್ಯಾಯಮೂರ್ತಿ ವಿ.ಜಿ.ಸಭಾಹಿತ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು.
ಉಮಾಭಾರತಿ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ಗದಗ ಜಿಲ್ಲೆಯ ರೈತ ರಘುನಾಥ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರದ್ದುಪಡಿಸಿದ ನ್ಯಾಯಪೀಠ, ಸರ್ಕಾರದ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಕರಣ ಕೈಬಿಡಲು ಪರಿಶೀಲಿಸುವಂತೆ ಹುಬ್ಬಳ್ಳಿ ನ್ಯಾಯಾಲಯಕ್ಕೆ ತಿಳಿಸಿತು. ಉಮಾ ಭಾರತಿ ವಿರುದ್ಧ ಸರ್ಕಾರ ಪಿತೂರಿ ನಡೆಸಿದೆ ಎಂದು ಗೌಡ ಆಪಾದಿಸಿದ್ದರು.
ಸರ್ಕಾರದ ಪರವಾಗಿ ವಾದಿಸಿದ ನ್ಯಾಯವಾದಿ ಬಿ.ಟಿ.ಪಾರ್ಥಸಾರಥಿ- ಉಮಾಭಾರತಿ ಪ್ರಕರಣದಲ್ಲಿ ಸರ್ಕಾರ ಯಾವುದೇ ರಾಜಕೀಯ ಮಾಡಿಲ್ಲ ಹಾಗೂ ಪ್ರಕರಣ ಕೈಬಿಡಲು 2002ರಲ್ಲಿ ನಡೆದ ಸಂಪುಟ ಸಭೆಯ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications