ರಕ್ಷಾಬಂಧನ: ಸೋದರಿಯ ನೋಡಬಂದ ಉಮಾ ಸೋದರನಿಗೆ ತಡೆ
ರಕ್ಷಾಬಂಧನ: ಸೋದರಿಯ ನೋಡಬಂದ ಉಮಾ ಸೋದರನಿಗೆ ತಡೆ
ಉಮಾ ಭಾರತಿ ಭೇಟಿಗೆ ಅವಕಾಶ ನಿರಾಕರಣೆ
ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ ಸೋದರಿಯನ್ನು ಭೇಟಿ ಮಾಡಲೆಂದೇ ಮಧ್ಯಪ್ರದೇಶದಿಂದ ಆಗಮಿಸಿದ್ದ ಉಮಾಭಾರತಿ ಅವರ ಸೋದರ ಸ್ವಾಮಿ ಲೋಧಿ ಅವರಿಗೆ ಪೊಲೀಸರು ತಡೆಯಾಡ್ಡಿದರು. ಭಾನುವಾರ (ಆ.29) ಧಾರವಾಡಕ್ಕೆ ಆಗಮಿಸಿದ್ದ ಸ್ವಾಮಿ ಲೋಧಿ ಅವರಿಗೆ ಉಮಾ ಭಾರತಿ ಅವರನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಲಾಯಿತು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹವನ್ನು ಜೈಲಾಗಿ ಪರಿವರ್ತಿಸಲಾಗಿದ್ದು , ಅಲ್ಲಿ ಉಮಾ ಭಾರತಿ ಅವರನ್ನು ಬಂಧನದಲ್ಲಿಡಲಾಗಿದೆ. ಉಮಾ ಅವರನ್ನು ಭೇಟಿ ಮಾಡಲು ಸ್ವಾಮಿ ಲೋಧಿಗೆ ಸೋಮವಾರ ಅವಧಿಕಾಶ ಕಲ್ಪಿಸುವ ನಿರೀಕ್ಷೆಯಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications