‘ಧ್ವಜ’ ರಾಜಕಾರಣ ವಿರುದ್ಧ ಸೆ.1 ರಿಂದ ಕೆಪಿಸಿಸಿ ಸರಣಿ ಕಾರ್ಯಕ್ರಮ
‘ಧ್ವಜ’ ರಾಜಕಾರಣ ವಿರುದ್ಧ ಸೆ.1 ರಿಂದ ಕೆಪಿಸಿಸಿ ಸರಣಿ ಕಾರ್ಯಕ್ರಮ
ಸೋನಿಯಾಗೂ ಉಮಾ ಮೇಲಿನ ಮೊಕದ್ದಮೆಗೂ ಸಂಬಂಧವಿಲ್ಲ -ಪೂಜಾರಿ
ಉಮಾ ಭಾರತಿ ಹಾಗೂ ಸಂಘಪರಿವಾರದ ಬಣ್ಣ ಬಯಲು ಮಾಡಲು ಸೆ.1ರಿಂದ ಕಾಂಗ್ರೆಸ್ ಸರಣಿ ಕಾರ್ಯಕ್ರಮ ಹಮ್ಮಿಕೊಂಡಿರುವ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಸುದ್ದಿಗಾರರಿಗೆ ನೀಡಿದರು. ಹುಬ್ಬಳ್ಳಿಯಲ್ಲಿನ ವಿವಾದಿತ ಈದ್ಗಾ ಮೈದಾನವನ್ನು ಧಾರ್ಮಿಕ ಉದ್ದೇಶಗಳಿಗಾಗಿ ಮುಸ್ಲಿಂ ಸಮುದಾಯಕ್ಕೆ 999 ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಸಾರ್ವಜನಿಕ ಉಪಯೋಗಕ್ಕಾಗಿ ಈ ಮೈದಾನವನ್ನು ನಿಷೇಧಿಸಲಾಗಿದೆ ಎಂದು ಪೂಜಾರಿ ಹೇಳಿದರು.
1964ರಲ್ಲಿ ಬಿ.ಡಿ.ಜತ್ತಿ ಸರ್ಕಾರ ಈದ್ಗಾ ಮೈದಾನವನ್ನು ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆ ನೀಡುವ ನಿರ್ಣಯ ಕೈಗೊಂಡಿದೆ. ವಾಸ್ತವ ಪರಿಸ್ಥಿತಿ ಹೀಗಿದ್ದೂ , 1994ರಲ್ಲಿ ಉಮಾ ಭಾರತಿ ಹಾಗೂ ಸಂಗಡಿಗರು ಪ್ರಚೋದನಕಾರಿ ಭಾಷಗಳ ಮೂಲಕ ಕೋಮು ಘರ್ಷಣೆಗೆ ಎಡೆ ಮಾಡಿಕೊಟ್ಟರು. ಈ ಹಿಂಸಾಚಾರದಲ್ಲಿ ನಾಲ್ವರು ಯುವಕರು ಜೀವ ಕಳಕೊಂಡರು. ಇದೆಲ್ಲ ಸತ್ಯವನ್ನು ಮುಚ್ಚಿಟ್ಟು ಉಮಾಭಾರತಿ ಈಗ ಧ್ವಜದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪೂಜಾರಿ ಆಪಾದಿಸಿದರು.
ಉಮಾ ಮೇಲಿನ ಮೊಕದ್ದಮೆಗೂ ಸೋನಿಯಾಗಾಂಧಿಗೂ ಸಂಬಂಧ ಕಲ್ಪಿಸುತ್ತಿರುವ ಸಂಘ ಪರಿಧಿವಾರ ಹಾಗೂ ಸುಷ್ಮಾ ಸ್ವರಾಜ್‌ರ ಹೇಳಿಕೆಗಳನ್ನು ಪೂಜಾರಿ ಖಂಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications