ಹೆಗಡೆಯಿಂದ ದೂರವಾಗಲು ಸ್ವಾರ್ಥವೇ ಕಾರಣ : ಸಿಂಧ್ಯಾ ತಪ್ಪೊಪ್ಪಿಗೆ
ಹೆಗಡೆಯಿಂದ ದೂರವಾಗಲು ಸ್ವಾರ್ಥವೇ ಕಾರಣ : ಸಿಂಧ್ಯಾ ತಪ್ಪೊಪ್ಪಿಗೆ
ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯ 78ನೇ ಜನ್ಮದಿನ
ನವ ನಿರ್ಮಾಣ ವೇದಿಕೆ ಆಯೋಜಿಸಿದ್ದ , ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ 78ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತ್ತೊಬ್ಬ ಸಚಿವ ಎಂ.ಪಿ.ಪ್ರಕಾಶ್ ಮಾತನಾಡಿ, ವಿಭಿನ್ನ ಅಭಿಪ್ರಾಯ ಹೊಂದುವುದಕ್ಕೂ, ದೂರ ಸರಿಯುವುದಕ್ಕೂ ವ್ಯತ್ಯಾಸವಿದೆ. ಅಭಿಪ್ರಾಯ ವಿಭಿನ್ನವಿದ್ದರೂ ನಾವು ಹೆಗಡೆಯವರಿಗೆ ಹತ್ತಿರವಾಗೇ ಇದ್ದೆವು ಎಂದರು.
ಹೆಗಡೆಯವರ ಹತ್ತಿರವಿದ್ದ ವಂದಿ ಮಾಗಧರೇ ಅವರನ್ನು ದಾರಿತಪ್ಪಿಸಿದರು ಎಂದು ಎಂ.ಪಿ.ಪ್ರಕಾಶ್ ವಿಷಾದಿಸಿದರು.
ಮಾಜಿ ಸಚಿವ ದೇಶಪಾಂಡೆ, ಪ್ರಾಧ್ಯಾಪಕ ಡಾ.ಸಿದ್ದಲಿಂಗಯ್ಯ, ಶಾಸಕ ರಾಮಚಂದ್ರಗೌಡ, ಎಂ.ಪಿ. ನಾಡಗೌಡ, ಹೆಗಡೆಯವರ ಪತ್ನಿ ಶಕುಂತಲಾ, ಪುತ್ರಭರತ್‌ಹೆಗಡೆ, ಜೆೆಡಿಎಸ್ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ, ನವನಿರ್ಮಾಣ ವೇದಿಕೆ ಹಂಗಾಮಿ ಅಧ್ಯಕ್ಷೆ ಮಮತಾ ನಿಚಾನಿ, ಪ್ರಧಾನ ಕಾರ್ಯದರ್ಶಿ ವಿ.ಎಸ್.ಕೃಷ್ಣಯ್ಯರ್ ಮತ್ತಿತರರು ಹಾಜರಿದ್ದರು.
(ಇನ್ಫೋವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications