ಮುಷ್ಕರ ಅಂತ್ಯ: ವಾರಕಾಲದ ರಸ್ತೆ ಬದಿ ನಿದ್ದೆಯಿಂದ ಎಚ್ಚತ್ತ ಲಾರಿಗಳು
ಮುಷ್ಕರ ಅಂತ್ಯ: ವಾರಕಾಲದ ರಸ್ತೆ ಬದಿ ನಿದ್ದೆಯಿಂದ ಎಚ್ಚತ್ತ ಲಾರಿಗಳು
ಸರ್ಕಾರದ ಭರವಸೆಗಳಿಗೆ ಓಗೊಟ್ಟ ಲಾರಿ ಮಾಲಿಕರು
ಅಖಿಲ ಭಾರತ ಮೋಟರ್ ಸಾರಿಗೆ ಕಾಂಗ್ರೆಸ್(ಎಐಎಂಟಿಸಿ) ಬೇಡಿಕೆಗಳಿಗೆ ಸರಕಾರ ಸ್ಪಂದಿಸಿರುವ ಕಾರಣ, ತನ್ನ ಅನಿರ್ದಿಷ್ಟಾವಧಿ ಮುಷ್ಕರವನ್ನು ನಿಲ್ಲಿಸಿದೆ. ಲಾರಿಗಳು ರಸ್ತೆಗಿಳಿದಿವೆ.
ಸೇವಾ ತೆರಿಗೆ ರದ್ಧತಿ ಹಾಗೂ ಮತ್ತಿತರ ಬೇಡಿಕೆಗಳಿಗೆ ಸರಕಾರದಿಂದ ಪೂರಕ ಪ್ರತಿಕ್ರಿಯೆ ಬಂದಿದೆ. ಸೇವಾ ತೆರಿಗೆ ಸಂಬಂಧಿಸಿದಂತೆ, ಕಂದಾಯ ಇಲಾಖೆ ಕಾರ್ಯದರ್ಶಿ ವಿನೀತಾ ರಾಯ್‌ರಿಂದ ಸ್ಪಷ್ಟನೆ ದೊರೆತಿದೆ. ಸೇವಾತೆರಿಗೆ ಕುರಿತು ಅಧ್ಯಯನಕ್ಕೆ ಲಾರಿ ಮಾಲೀಕರು ಸೇರಿದಂತೆ ಜಂಟಿ ಸಮಿತಿ ರಚಿಸಿಸುವುದಾಗಿ ಸರಕಾರ ತಿಳಿಸಿದೆ ಎಂದು ಎಐಎಂಟಿಸಿ ಅಧ್ಯಕ್ಷ ಬಿ.ಎಸ್. ದುಮಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಗಸ್ಟ್ 21ರಿಂದ ಆರಂಭಗೊಂಡಿದ್ದ ಲಾರಿ ಮುಷ್ಕರ ಮುಕ್ತಾಯಗೊಂಡಿದೆ. ಸರಕಾರದೊಂದಿಗಿನ ಸಭೆ ಮಾತುಕತೆ ನಂತರ ಎರಡು ಪ್ರತ್ಯೇಕ ಒಪ್ಪಂದಗಳನ್ನು ಎಐಎಂಟಿಸಿ ಮಾಡಿಕೊಂಡಿದೆ.
ಎಸ್ಮಾದಡಿ ಮುಷ್ಕರದ ಸಂದರ್ಭದಲ್ಲಿ ಲಾರಿ ಮಾಲೀಕನ್ನು ಬಂಧಿಸಿ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ಸರಕಾರ ಹಿಂದಕ್ಕೆ ಪಡೆಯಲಿದೆ. ರಚಿಸಲಾಗುವ ಸಮಿತಿ ಎರಡು ತಿಂಗಳಲ್ಲಿ ತನ್ನ ವರದಿ ಸಲ್ಲಿಸಲಿದೆ ಎಂದು ಕಂದಾಯ ಕಾರ್ಯದರ್ಶಿ ವಿನೀತಾ ರಾಯ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications