‘ಕಾಮೆಡ್-ಕೆ’ ಜೊತೆ ಒಪ್ಪಂದ ; ಈ ವರ್ಷದ ಸಿಇಟಿ ಬಿಕ್ಕಟ್ಟು ಇತ್ಯರ್ಥ
‘ಕಾಮೆಡ್-ಕೆ’ ಜೊತೆ ಒಪ್ಪಂದ ; ಈ ವರ್ಷದ ಸಿಇಟಿ ಬಿಕ್ಕಟ್ಟು ಇತ್ಯರ್ಥ
ಸೆ.3ರಂದು ಸುಪ್ರಿಂಕೋರ್ಟ್ ಮುಂದೆ ಮಾತುಕತೆಯ ಟಿಪ್ಪಣಿಗಳು
ಕಾಮೆಡ್-ಕೆ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ. ಸಿಇಟಿ ಬಿಕ್ಕಟ್ಟಿನ ಬಗ್ಗೆ ಸೆಪ್ಟಂಬರ್ 3ರಂದು ಸುಪ್ರಿಂಕೋರ್ಟ್ ತೀರ್ಪು ನೀಡಲಿದ್ದು , ಅಂದು ಮಾತುಕತೆಯ ವಿವರಗಳನ್ನು ನ್ಯಾಯಪೀಠದ ಮುಂದಿಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಪಿಜಿಆರ್ ಸಿಂಧ್ಯಾ ಶನಿವಾರ (ಆ.28) ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾಗೂ ಕಾಮೆಡ್-ಕೆ ಪ್ರತಿನಿಧಿಗಳ ಮಾತುಕತೆ ಶನಿವಾರ ನಡೆಯಿತು. ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧ್ಯಾ, ಸಿಇಟಿ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ಖಚಿತ ವಿಶ್ವಾಸ ವ್ಯಕ್ತಪಡಿಸಿದರು.
ಬಡ ವಿದ್ಯಾರ್ಥಿಗಳಿಗೆ ನೆರವು ನೀಡಲು ಈ ವರ್ಷ ಸರ್ಕಾರದೊಂದಿಗೆ ಸಹಕರಿಸಲು ಕಾಮೆಡ್-ಕೆ ಒಪ್ಪಿಕೊಂಡಿದೆ. ಸೋಮವಾರ ಸರ್ವ ಪಕ್ಷಗಳ ಸಭೆಯನ್ನು ಮುಖ್ಯಮಂತ್ರಿಗಳು ಕರೆದಿದ್ದು , ಈ ಸಭೆಯಲ್ಲಿ ಕಾಮೆಡ್-ಕೆ ಜೊತೆಗಿನ ಮಾತುಕತೆಯ ವಿವರಗಳನ್ನು ಮಂಡಿಸಲಾಗುವುದು ಎಂದು ಸಿಂಧ್ಯಾ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications