ಪೆಟ್ರೋಲ್-ಡಿಸೇಲ್, ಅಗತ್ಯವಸ್ತುಗಳ ಸಾಗಾಣಿಕೆ ನಿಲ್ಲಿಸುವ ಬೆದರಿಕೆ
ಪೆಟ್ರೋಲ್-ಡಿಸೇಲ್, ಅಗತ್ಯವಸ್ತುಗಳ ಸಾಗಾಣಿಕೆ ನಿಲ್ಲಿಸುವ ಬೆದರಿಕೆ
ಮುರಿದು ಬಿದ್ದ ಮಾತುಕತೆ ; ಆರನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ
ಕೇಂದ್ರ ಹಣಕಾಸು ಸಚಿವಾಲಯದ ಜೊತೆಗಿನ ಮಾತುಕತೆ ಫಲಕಾರಿಯಾಗದ ಕಾರಣ, ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳು ನಿರ್ಧರಿಸಿವೆ.
ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಪೆಟ್ರೊಲ್ ಹಾಗೂ ಡೀಸೆಲ್ ಸಾಗಾಟ ನಿಲ್ಲಿಸುವುದಾಗಿ ಲಾರಿ ಮಾಲೀಕರ ಸಂಘ ಬೆದರಿಕೆ ಹಾಕಿದೆ. ಈ ಸಂಬಂಧ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ಪ್ರತಿದಿನ 380 ಲೋಡ್ ಪೆಟ್ರೋಲ್-ಡಿಸೇಲ್ ಸಾಗಿಸುತ್ತಿದ್ದ ಲಾರಿಗಳಲ್ಲಿ ಕೇವಲ 16 ಲಾರಿಗಳು ಮಾತ್ರ ರಸ್ತೆಗಿಳಿದಿವೆ. ಅಗತ್ಯ ವಸ್ತುಗಳ ಸಾಗಣಿಕೆಯನ್ನು ನಿಲ್ಲಿಸಿ ಸರಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ರಾಜ್ಯ ಲಾರಿ ಮಾಲೀಕರು ಮುತ್ತು ಏಜೆಂಟರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಮುಷ್ಕರದಿಂದ ರಾಜ್ಯದಲ್ಲಿ ಯಾವುದೆ ತೊಂದರೆಯಾಗಿಲ್ಲ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಶ್ರೀಧರ್ ಹೇಳುತ್ತಿದ್ದರು, ಹಣ್ಣು-ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾರಿ ಸಿಬ್ಬಂದಿಯನ್ನೇ ನಂಬಿದ್ದ, ರಸ್ತೆಬದಿಯ ವ್ಯಾಪಾರಿಗಳು ಹಾಗೂ ಡಾಬಾಗಳ ಮಾಲೀಕರು ಕೈಕಟ್ಟಿ ಕುಳಿದಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಸಡಗರದಲ್ಲಿರುವ ಗೃಹಿಣಿಯರು ಅಡಿಗೆ ಅನಿಲದ ವ್ಯತ್ಯಯದಿಂದ ಬಳಲುತ್ತಿದ್ದಾರೆ.
(ಇನ್ಫೋವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications