ಜಾಮೀನು ಬೇಡ, ಜೈಲಿನಲ್ಲೇ ಇರುವೆ: ಹುಬ್ಬಳ್ಳಿಯಲ್ಲಿ ಉಮಾಭಾರತಿ
ಜಾಮೀನು ಬೇಡ, ಜೈಲಿನಲ್ಲೇ ಇರುವೆ: ಹುಬ್ಬಳ್ಳಿಯಲ್ಲಿ ಉಮಾಭಾರತಿ
ಕಾಂಗ್ರೆಸ್ ಸರ್ಕಾರದಿಂದ ರಾಷ್ಟ್ರಧ್ವಜಕ್ಕೆ ಅವಮಾನ...
ನ್ಯಾಯಾಲಯದಲ್ಲಿ ಶರಣಾಗಲು ಆ.25ರ ಬುಧವಾರ ಬೆಳಗ್ಗೆ ಹುಬ್ಬಳ್ಳಿಗೆ ಧಾವಿಸಿದ ಉಮಾ ಭಾರತಿ- ತಾವು ಜಾಮೀನು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಷ್ಟ್ರಧ್ವಜ ಹಾರಿಸುವುದು ಅಪರಾಧವಲ್ಲ . ಆದರೆ ರಾಷ್ಟ್ರಧ್ವಜ ಹಾರಿಸಿದ್ದನ್ನು ಅಪರಾದವಾಗಿ ಬಿಂಬಿಸುತ್ತಿದ್ದು , ಈ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ರೈಲ್ವೆ ನಿಲ್ದಾಣದಲ್ಲಿ ಹೊರಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾ ಭಾರತಿ ದೂರಿದರು.
ಧಾರವಾಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಡಿ.ರೂಪಾ ಅವರು ಅಳ್ನಾವರ್‌ನಲ್ಲಿ ರೈಲಿನಲ್ಲಿಯೇ ತಮ್ಮನ್ನು ಬಂಧಿಸಲು ಮುಂದಾಗಿದ್ದರು. ಆದರೆ ದೀರ್ಘ ಪ್ರಯಾಣದಿಂದ ಬಳಲಿದ್ದ ತಾವು ನ್ಯಾಯಾಲಯದಲ್ಲಿಯೇ ಶರಣಾಗುವುದಾಗಿ ತಿಳಿಸಿದೆ. ವಾರಂಟ್‌ನ ಪ್ರತಿಯಾಂದನ್ನು ಪೊಲೀಸ್ ಅಧಿಕಾರಿ ತಮಗೆ ನೀಡಿದರು ಎಂದು ಉಮಾ ಭಾರತಿ ಹೇಳಿದರು.
ಉಮಾ ಭಾರತಿ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ರೈಲು ನಿಲ್ದಾಣದ ಹೊರಭಾಗದಲ್ಲಿ ಜಮಾಯಿಸಿದ್ದ ಬಹುಸಂಖ್ಯೆಯ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕಿಗೆ ಜಯಘೋಷ ಕೂಗಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications