ಉಮಾ ಭಾರತಿ ಶರಣಾಗತಿ : ಹದಿನಾಲ್ಕು ದಿನ ನ್ಯಾಯಾಂಗದ ವಶಕ್ಕೆ
ಉಮಾ ಭಾರತಿ ಶರಣಾಗತಿ : ಹದಿನಾಲ್ಕು ದಿನ ನ್ಯಾಯಾಂಗದ ವಶಕ್ಕೆ
ನಿಷೇಧಾಜ್ಞೆ ನಡುವೆಯೂ ಹುಬ್ಬಳ್ಳಿಯಲ್ಲೆಲ್ಲ ಉಮಾ ಭಾರತಿಗೆ ಜೈ ಘೋಷಣೆ
ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಹಾಗೂ ಹುಬ್ಬಳ್ಳಿಯಲ್ಲಿನ ಹಿಂಸಾಚಾರ ಸಂಬಂಧ 10 ವರ್ಷದ ಹಿಂದಿನ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಉಮಾ ಭಾರತಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು . ಈ ಸಂಬಂಧ ಹುಬ್ಬಳ್ಳಿಗೆ ಧಾವಿಸಿದ ಉಮಾ, ಬುಧವಾರ ಬೆಳಗ್ಗೆ ನ್ಯಾಯಾಲಯದಲ್ಲಿ ಶರಣಾದರು.
ನ್ಯಾಯಾಲಯದ ವ್ಯಾಪ್ತಿಯ 2 ಕಿಮೀ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು . ನ್ಯಾಯಾಲಯದೊಳಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು .
ಉಮಾ ಭಾರತಿ ಅವರನ್ನು ಬೆಳಗಾವಿ ಸಮೀಪ ನ್ಯಾಯಾಂಗ ಕಸ್ಟಡಿಯಲ್ಲಿ ಇಡಲಾಗುವುದು ಎಂದು ಡಿಜಿಪಿ ಬೋರ್ಕರ್ ತಿಳಿಸಿದ್ದಾರೆ.
(ಪಿಟಿಐ)
ವಾರ್ತಾ ಸಂಚಯ
ಜಾಮೀನು ಬೇಡ, ಜೈಲಿನಲ್ಲೇ ಇರುವೆ: ಹುಬ್ಬಳ್ಳಿಯಲ್ಲಿ ಉಮಾಭಾರತಿ
ಹುಬ್ಬಳ್ಳಿ: ಉಮಾಭಾರತಿ ಹಾದಿಯುದ್ದಕ್ಕೂ ಪೊಲೀಸರ ಸರ್ಪಗಾವಲು
ಉಮಾಭಾರತಿ ಬಂಧಿಸಿದರೆ ಹುಷಾರ್ : ರಾಜ್ಯ ಬಿಜೆಪಿ ಗುರ್ರ್ ಗುರ್ರ್
ಮುಖಪುಟ / ವಾರ್ತೆಗಳು












Click it and Unblock the Notifications