ಉಮಾಗೆ ಬೆಂಬಲ : ಗುರುವಾರ ‘ಕರ್ನಾಟಕ ಬಂದ್’ಗೆ ಬಿಜೆಪಿ ಕರೆ
ಉಮಾಗೆ ಬೆಂಬಲ : ಗುರುವಾರ ‘ಕರ್ನಾಟಕ ಬಂದ್’ಗೆ ಬಿಜೆಪಿ ಕರೆ
ಆಗಸ್ಟ್ 30ರಿಂದ ಸೆಪ್ಟಂಬರ್ 25ರವರೆಗೆ ಹುಬ್ಬಳ್ಳಿಯಲ್ಲಿ ಸತ್ಯಾಗ್ರಹ
ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಬಂದ್ ನಡೆಸಲು ಬಿಜೆಪಿ ನಿರ್ಧರಿಸಿದೆ ಎಂದು ಬಿಜೆಪಿ ಶಾಸಕರಾದ ಅರವಿಂಟ ಲಿಂಬಾವಳಿ, ಆರ್. ಅಶೋಕ್ ಹಾಗೂ ಪಕ್ಷದ ವಕ್ತಾರ ಸುರೇಶ್‌ಕುಮಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಈ ನಡುವೆ ಮಧ್ಯಪ್ರದೇಶದ ಯುವಮೋರ್ಚಾ ಕೂಡ ಗುರುವಾರ ಮಧ್ಯಪ್ರದೇಶದ ಬಂದ್‌ಗೆ ಕರೆ ನೀಡಿದೆ. ಕರ್ನಾ
ಟಕ ಹಾಗೂ ಮಧ್ಯಪ್ರದೇಶಗಳಲ್ಲಿ ಗುರುವಾರ ಬಂದ್ ನಡೆಸಲಾಗುವುದು ಎಂದು ಯುವಮೋರ್ಚಾದ ವಕ್ತಾರರು ತಿಳಿಸಿದ್ದಾರೆ.
ಸತ್ಯಾಗ್ರಹ : ಉಮಾಭಾರತಿ ಅವರಿಗೆ ಬೆಂಬಲ ಸೂಚಿಸಲು ಆಗಸ್ಟ್ 30ರಿಂದ ಸೆಪ್ಟಂಬರ್ 25ರವರೆಗೆ ಹುಬ್ಬಳ್ಳಿಯಲ್ಲಿ ಸತ್ಯಾಗ್ರಹ ನಡೆಸಲಾಗುವುದು. ಮಧ್ಯಪ್ರದೇಶದ ಪ್ರತಿಜಿಲ್ಲೆಯಿಂದಲೂ 50 ಬಿಜೆಪಿ ಕಾರ್ಯಕರ್ತರು ಹಾಗೂ ಕರ್ನಾಟಕದ ಪ್ರತಿ ಜಿಲ್ಲೆಯಿಂದಲೂ ತಲಾ 1000 ಕಾರ್ಯಕರ್ತರು ಹುಬ್ಬಳ್ಳಿಯಲ್ಲಿನ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸುವರು. ದೇಶದ ಮೂಲೆಮೂಲೆಯಲ್ಲಿ ತ್ರಿವರ್ಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೋರ್ಚಾ ತಿಳಿಸಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications