ಎರಡು ರಷ್ಯನ್‌ ವಿಮಾನ ಸ್ಫೋಟ, 90 ಸಾವು, ಉಗ್ರರ ಕೈವಾಡ ಶಂಕೆ

ಎರಡು ರಷ್ಯನ್‌ ವಿಮಾನ ಸ್ಫೋಟ, 90 ಸಾವು, ಉಗ್ರರ ಕೈವಾಡ ಶಂಕೆ
ಏಕಕಾಲದಲ್ಲಿ ರೇಡಾರ್‌ ತೆರೆಯಿಂದ ಮಾಯವಾದ ವಿಮಾನಗಳು! ಸೆ.11 ಸಮೀಪಿಸುತ್ತಿದೆ.....

ಮಾಸ್ಕೋ : ರಷ್ಯಾದ ಎರಡು ಪ್ರಯಾಣಿಕರ ವಿಮಾನಗಳು ಸ್ಫೋಟಿಸಿದ್ದು, ಅಪಘಾತದಲ್ಲಿ 90ಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಆ.24ರ ಮಂಗಳವಾರ ಈ ದುರಂತ ಸಂಭವಿಸಿದೆ.

ಹೆಚ್ಚೂಕಡಿಮೆ ಒಂದೇ ಸಮಯದಲ್ಲಿ ಅಪಘಾತಕ್ಕೀಡಾದ ವಿಮಾನಗಳ ದುರಂತವನ್ನು ಭಯೋತ್ಪಾದಕರ ಕೃತ್ಯ ಎಂದು ಶಂಕಿಸಲಾಗಿದೆ. ಸೆಪ್ಟಂಬರ್‌ 11 ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

40 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಒಂದು ವಿಮಾನ ರಷ್ಯಾದ ದಕ್ಷಿಣ ಭಾಗದ ರೊಸ್ತಾವ್‌-ಆನ್‌-ಡನ್‌ ನಗರದ ಬಳಿ ಕುಸಿಯುವ ಮುನ್ನ ಹೈಜಾಕ್‌ ಅಲಾರಾಂ ಕಳುಹಿಸಿದೆ ಎಂದು ಇಂಟರ್‌ಫ್ಯಾಕ್ಸ್‌ ಸುದ್ದಿಸಂಸ್ಥೆ ತಿಳಿಸಿದೆ. ಮಾಸ್ಕೋಗೆ 90 ಮೈಲು ದೂರದ ತುಲಾ ಎನ್ನುವ ಪ್ರದೇಶದಲ್ಲಿ ಮತ್ತೊಂದು ವಿಮಾನ ಸ್ಫೋಟಿಸಿದೆ.

ನಿಮಿಷದ ಅಂತರದಲ್ಲಿ ಎರಡೂ ವಿಮಾನಗಳು ರೇಡಾರ್‌ ಕಣ್ಗಾವಲಿನಿಂದ ಕಣ್ಮರೆಯಾದವು ಎನ್ನಲಾಗಿದೆ. ಘಟನೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದು - ಎಫ್‌ಎಸ್‌ಬಿ ರಕ್ಷಣಾ ಸೇವಾದಳಕ್ಕೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿದ್ದಾರೆ.

ದೇಶದಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಬಿಗಿ ಪಹರೆ ಹಾಕಲಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+