ಉಮಾಭಾರತಿ ಬಂಧಿಸಿದರೆ ಹುಷಾರ್‌ : ರಾಜ್ಯ ಬಿಜೆಪಿ ಗುರ್ರ್‌ ಗುರ್ರ್‌

ಉಮಾಭಾರತಿ ಬಂಧಿಸಿದರೆ ಹುಷಾರ್‌ : ರಾಜ್ಯ ಬಿಜೆಪಿ ಗುರ್ರ್‌ ಗುರ್ರ್‌
ಗೋವಾ ಎಕ್ಸ್‌ಪ್ರೆಸ್‌ನಲ್ಲಿ ಹುಬ್ಬಳ್ಳಿಯತ್ತ ಉಮಾ ಪಯಣ ; ಬುಧವಾರದ ನಾಟಕಕ್ಕೆ ಉಭಯ ತಂಡಗಳಿಂದ ವೇದಿಕೆ ರೆಡಿ.

ಬೆಂಗಳೂರು: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿಯನ್ನು ರಾಜ್ಯಸರಕಾರ ಬಂಧಿಸಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಮಂಗಳವಾರ ಎಚ್ಚರಿಸಿದೆ.

ಹತ್ತು ವರ್ಷಗಳ ಹಿಂದಿನ ಈದ್ಗಾ ಪ್ರಕರಣದನ್ವಯ, ಹುಬ್ಬಳ್ಳಿ ಕೋರ್ಟ್‌ನಲ್ಲಿ ಶರಣಾಗಲು ಬುಧವಾರ ಬೆಳಗ್ಗೆ ಉಮಾಭಾರತಿ ಕರ್ನಾಟಕಕ್ಕೆ ಗೋವಾ ಎಕ್ಸ್‌ಪ್ರೆಸ್‌ನಲ್ಲಿ ಬರುತ್ತಿದ್ದಾರೆ. ರಾಜ್ಯಸರಕಾರ ಹಳೆಯ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡಿದೆ. ಆಕೆಯನ್ನು ಬಂಧಿಸಿದರೆ ಅನಗತ್ಯ ಘರ್ಷನೆಗೆ ಸರಕಾರವೇ ಕಾರಣವಾಗುತ್ತದೆ ಎಂದು ಪಕ್ಷದ ಕಾರ್ಯದರ್ಶಿ ಅರವಿಂದ್‌ ನಿಂಬಾವಳಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೊಂದು ರಾಜಕೀಯ ಪ್ರೇರಿತ ವಿಚಾರ. ಕಾಂಗ್ರೆಸ್‌ನಾಯಕಿ ಸೋನಿಯಾ ಗಾಂಧಿ ಸೂಚನೆ ಮೇರೆಗೆ, ಧರ್ಮಸಿಂಗ್‌ ಸರಕಾರ ಕಾರ್ಯಪ್ರವೃತ್ತವಾಗಿದೆ. ಈ ಪ್ರಕರಣದಲ್ಲಿ 21 ಜನರನ್ನು ಆರೋಪಿಗಳೆಂದು ಹೇಳಲಾಗಿದೆ. ಆದರೆ ಅಪರಾಧಕ್ಕಿಂತ, ಉಮಾಭಾರತಿಯೇ ಸರಕಾರಕ್ಕೆ ಮುಖ್ಯವಾಗಿದ್ದಾರೆ. ಮುಂದಿನ ಬೆಳವಣಿಗೆಗಳನ್ನು ಗಮನಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಅನಂತಕುಮಾರ್‌ ಸೇರಿದಂತೆ ಅನೇಕ ಮುಖಂಡರು ಬುಧವಾರ ಹುಬ್ಬಳ್ಳಿಗೆ ತೆರಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಕಾಂಗ್ರೆಸ್‌ ಪಿತೂರಿ: ಈ ಪ್ರಕರಣ ಕಾಂಗ್ರೆಸ್‌ನ ಪೂರ್ವನಿಯೋಜಿತ ಕೃತ್ಯ. ರಾಷ್ಟ್ರದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ರಾಷ್ಟ್ರಧ್ವಜ ಹಾರಿಸುವುದರಿಂದ ಯಾವುದೇ ಕೋಮಿಗೆ ತೊಂದರೆಯಾಗುವುದಿಲ್ಲ ಎಂದು ಉಮಾಭಾರತಿ ಅಭಿಪ್ರಾಯಪಟ್ಟಿದ್ದಾರೆ.

ನಾನು ಯಾವುದೇ ಹಿಂಸೆಯಲ್ಲಿ ಪಾಲ್ಗೊಂಡಿಲ್ಲ . ಹಿಂಸೆಗೆ ಪ್ರಚೋದಿಸಿದ್ದೇ ಕರ್ನಾಟಕದ ಪೊಲೀಸರು ಎಂದಿರುವ ್ಫಉಮಾ- ಕಾಂಗ್ರೆಸ್‌ ನನ್ನ ವಿರುದ್ಧ ಪಿತೂರಿ ಮಾಡಿದೆ ಎಂದು ಆಪಾದಿಸಿದ್ದಾರೆ. ನ್ಯಾಯಾಲಯದ ಮುಂದೆ ಶರಣಾಗಲು ಹುಬ್ಬಳ್ಳಿಗೆ ಧಾವಿಸುತ್ತಿರುವ ಅವರು ಮಹಾರಾಷ್ಟ್ರದ ಭೂಸ್ವಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

(ಪಿಟಿಐ)

ವಾರ್ತಾ ಸಂಚಯ
ರಾಜ್ಯಕ್ಕೆ ಕಾಲಿಟ್ಟ ತಕ್ಷಣ ಉಮಾ ಭಾರತಿ ಬಂಧನ -ಡಿಜಿಪಿ ಬೋರ್ಕರ್‌
ಭೋಪಾಲ್‌ನತ್ತ ರಾಜ್ಯದ ಪೊಲೀಸ್‌ : ಉಮಾ ರಾಜೀನಾಮೆ ಸ್ವೀಕೃತ

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+