ಸೋನಿಯಾ ಸಮ್ಮತಿಯಷ್ಟೇ ಬಾಕಿ ; ಸಂಪುಟ ವಿಸ್ತರಣೆ ಯಾವುದೇ ಕ್ಷಣ
ಸೋನಿಯಾ ಸಮ್ಮತಿಯಷ್ಟೇ ಬಾಕಿ ; ಸಂಪುಟ ವಿಸ್ತರಣೆ ಯಾವುದೇ ಕ್ಷಣ
ಕಾಂಗ್ರೆಸ್ ಸಿದ್ಧವಾದ ಗಂಟೆಯಾಳಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ - ಸಿದ್ಧರಾಮಯ್ಯ
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಲಾಸರಾವ್ ದೇಶ್‌ಮುಖ್, ಈಗಾಗಲೇ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಜೆಡಿಎಸ್‌ನ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಎಲ್ಲಾ ಕಸರತ್ತುಗಳು ಪೂರ್ಣಗೊಂಡಿವೆ. ಮಂಗಳವಾರ ಮುಖ್ಯಮಂತ್ರಿ ಧರ್ಮಸಿಂಗ್, ಸೋನಿಯಾರನ್ನು ಭೇಟಿಮಾಡಿ ಖಾತೆಗಳ ಹಂಚಿಕೆ ಬಗೆಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಧರ್ಮಸಿಂಗ್ ಸುದ್ದಿಗಾರರಿಗೆ, ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆಯಾಗಲಿದ್ದು, ಸೋನಿಯಾ ಭೇಟಿಯಾಂದು ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.
ನಾವು ಸದಾ ರೆಡಿ: ಕಾಂಗ್ರೆಸ್ ಸಂಪುಟ ವಿಸ್ತರಣೆಗೆ ಸಿದ್ಧವೆಂದ ಗಂಟೆಯಾಳಗೆ ಜೆಡಿಎಸ್ ಮಂತ್ರಿಮಂಡಲಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ. ನಮ್ಮದು ಯಾವತ್ತು ತಕರಾರಿರಲಿಲ್ಲವೆಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂತ್ರಿಮಂಡಲದಲ್ಲಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಕೃಷ್ಣಪ್ಪ ಮತ್ತಿತರರಿಗೆ ಅವಕಾಶ ಕಲ್ಪಿಸುವುದನ್ನು ಜೆಡಿಎಸ್ ವಿರೋಧಿಸಿತ್ತು. ಅಲ್ಲದೇ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿತ್ತು. ಹೀಗಾಗಿ ಸಂಪುಟ ವಿಸ್ತರಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಮಂತ್ರಿ ಮಂಡಲ ವಿಸ್ತರಣೆ ತೀವ್ರ ಕುತೂಹಲ ತಂದಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications