ಉಮಾಭಾರತಿ ಹಿನ್ನಡೆ; ಪ್ರಕರಣ ಕೈಬಿಡಲು ಹುಬ್ಬಳ್ಳಿಕೋರ್ಟ್ ನಕಾರ
ಉಮಾಭಾರತಿ ಹಿನ್ನಡೆ; ಪ್ರಕರಣ ಕೈಬಿಡಲು ಹುಬ್ಬಳ್ಳಿಕೋರ್ಟ್ ನಕಾರ
ಸಮಯ ಮಿತಿ ಮುಗಿದಿದೆ, ಉಮಾ ವಕೀಲರ ವಾದ ಪಕ್ಕಕ್ಕೆ.
ಹತ್ತು ವರ್ಷದ ನಂತರ ಮೊಕದ್ದಮೆಗೆ ಉದ್ದೇಶಪೂವಕವಾಗಿ ಜೀವತುಂಬಲಾಗಿದೆ. ಕಾಲದ ಮಿತಿ ದಾಟಿರುವ ಈ ಪ್ರಕರಣವನ್ನು ಕೈಬಿಡಬೇಕು ಎನ್ನುವ ಉಮಾ ಭಾರತಿ ವಕೀಲ ಆರ್.ಆರ್.ಪಾಟೀಲರ ವಾದವನ್ನು ನ್ಯಾಯಮೂರ್ತಿಗಳು ತಳ್ಳಿಹಾಕಿದರು. ಉಮಾ ವಿರುದ್ಧ ಹೊರಡಿಸಿರುವ ಜಾಮೀನು ರಹಿತ ವಾರಂಟ್ ಜಾರಿಯಲ್ಲಿರುತ್ತದೆ ಎಂದೂ ನ್ಯಾಯಮೂರ್ತಿ ಸ್ಪಷ್ಟಪಡಿಸಿದರು. ಇದರೊಂದಿಗೆ ಉಮಾ ಭಾರತಿ ಹಿನ್ನಡೆ ಅನುಭವಿಸಿದಂತಾಯಿತು.
ನಿಕಟಪೂರ್ವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರ ಸರ್ಕಾರ, ಉಮಾ ಭಾರತಿ ಮೇಲಿನ ಕ್ರಿಮಿನಲ್ ಮೊಕದ್ದಮೆಯನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿತ್ತು . ಆದರೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮೊಕದ್ದಮೆಯನ್ನು ಕೈಬಿಡದಿರಲು ನಿರ್ಧರಿಸಿದೆ.
1994ರಲ್ಲಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಸಂದರ್ಭದಲ್ಲಿ ಉಂಟಾದ ಕೋಮು ಹಿಂಸಾಚಾರ- ಕರ್ಫ್ಯೂ ಹೇರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾ ಭಾರತಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
(ಪಿಟಿಐ)
ವಾರ್ತಾ ಸಂಚಯ
ಭೋಪಾಲ್‌ನತ್ತ ರಾಜ್ಯದ ಪೊಲೀಸ್ : ಉಮಾ ರಾಜೀನಾಮೆ ಸ್ವೀಕೃತ
ಮುಖಪುಟ / ವಾರ್ತೆಗಳು












Click it and Unblock the Notifications