ಬೆಂಗಳೂರ ಕೋರ್ಟಲ್ಲೇ ಜಯಲಲಿತಾ ವಿಚಾರಣೆ-ಸುಪ್ರಿಂಕೋರ್ಟ್
ಬೆಂಗಳೂರ ಕೋರ್ಟಲ್ಲೇ ಜಯಲಲಿತಾ ವಿಚಾರಣೆ-ಸುಪ್ರಿಂಕೋರ್ಟ್
ವಾರದೊಳಗೆ ದಾಖಲೆಗಳ ರವಾನಿಸಲು ತಮಿಳುನಾಡಿಗೆ ನಿರ್ದೇಶನ
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸಂಘರ್ಷದ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಬೆಂಗಳೂರಿನಲ್ಲಿ ಅಡ್ಡಿ ಉಂಟಾಗಬಹುದು. ಆದುದರಿಂದ ವಿಚಾರಣೆಯ ಸ್ಥಳವನ್ನು ಬೆಂಗಳೂರಿನ ಬದಲು ಕೇರಳಕ್ಕೆ ಬದಲಿಸುವಂತೆ ಜಯಲಲಿತಾ ಕೋರಿದ್ದರು. ವಿಚಾರಣೆಯನ್ನು ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟನೆ ಸಲ್ಲಿಸಿತ್ತು .
ಜಯಲಲಿತಾ ಮನವಿಯನ್ನು ಪರಿಶೀಲಿಸಿರುವ ನ್ಯಾಯಪೀಠ, ಬೆಂಗಳೂರಿನಲ್ಲಿಯೇ ವಿಚಾರಣೆ ನಡೆಸುವಂತೆ ಸೋಮವಾರ (ಆ.23) ನಿರ್ದೇಶನ ನೀಡಿದೆ. ಇನ್ನೊಂದು ವಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ರವಾನಿಸಬೇಕು ಎಂದೂ ನ್ಯಾಯಪೀಠ ಹೇಳಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications