ತುಳುಕಿದ ಕನ್ನಂಬಾಡಿಯಲ್ಲಿ ಎನ್.ಧರ್ಮಸಿಂಗ್ ‘ರಾಹುಕಾಲ ಬಾಗಿನ’
ತುಳುಕಿದ ಕನ್ನಂಬಾಡಿಯಲ್ಲಿ ಎನ್.ಧರ್ಮಸಿಂಗ್ ‘ರಾಹುಕಾಲ ಬಾಗಿನ’
ಪೂಜೆಯಲ್ಲಿ ಸ್ನೇಹಭಾವ ತೋರಿದ ಜೆಡಿಎಸ್-ಕಾಂಗ್ರೆಸ್ ನಾಯಕರು
ಬೆಂಗಳೂರಿನಿಂದ ಐರಾವತ ಬಸ್‌ನಲ್ಲಿ ತಮ್ಮ ಪತ್ನಿ ಪ್ರಭಾವತಿ ಧರ್ಮಸಿಂಗ್, ಉಪಮುಖ್ಯಮಂತ್ರಿ ಸಿದ್ಧರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ತಮ್ಮ ದಂಡಿನೊಂದಿಗೆ ಮುಖ್ಯಮಂತ್ರಿಗಳು ಮಾರ್ಗದುದ್ದಕ್ಕೂ ಜನರ ಸ್ವಾಗತ ಸ್ವೀಕರಿಸಿದರು. ಕೆ.ಆರ್.ಎಸ್. ತಲುಪುವ ಹೊತ್ತಿಗೆ ನಿಗದಿತ ಸಮಯ ಮುಗಿದಿತ್ತು.
ಕೊಡಗಿನ ಭಾಗಮಂಡಲದಲ್ಲಿ ಹುಟ್ಟುವ ಕರ್ನಾಟಕದ ಜೀವನಾಡಿಯಾದ ಕಾವೇರಿ ಪ್ರಸ್ತುತ ಮೈತುಂಬಿ ಹರಿಯುತ್ತಿದ್ದಾಳೆ. ಜಲಾಶಯದಲ್ಲಂತೂ ಕಣ್ಣುಹಾಯಿಸಿದಷ್ಟು ಜಲರಾಶಿ. ಪ್ರತಿದಿನ ಜಲಾಶಯದಿಂದ ನದಿಗೆ 1,350 ಕ್ಯೂಸೆಕ್ಸ್ ನೀರನ್ನು ಹರಿದು ಬಿಡಲಾಗುತ್ತಿದೆ. ಮೈಸೂರು -ಮಂಡ್ಯದ ರೈತರು ನವೋತ್ಸಾಹದಿಂದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications