‘ತಳವೂರಲು ಧರ್ಮಸಿಂಗ್‌ಗೆ ಅವಕಾಶ ಕೊಡಿ, ನಂತರ ಮಾತನಾಡಿ’

‘ತಳವೂರಲು ಧರ್ಮಸಿಂಗ್‌ಗೆ ಅವಕಾಶ ಕೊಡಿ, ನಂತರ ಮಾತನಾಡಿ’
ಮತ್ತೆ ಪಾಂಚಜನ್ಯ ಮೊಳಗಿಸುವ ಉತ್ಸಾಹದಿ ಕೃಷ್ಣ , ಅ.2ರಿಂದ ರಾಜ್ಯ ಪ್ರವಾಸ

ಬೆಂಗಳೂರು : ಮುಖ್ಯಮಂತ್ರಿ ಧರ್ಮಸಿಂಗ್‌ರ ನೇತೃತ್ವದ ಸಮ್ಮಿಶ್ರ ಸರ್ಕಾರ ಒಂದು ಪ್ರಯೋಗವಾಗಿದ್ದು , ನೆಲೆ ಕಂಡುಕೊಳ್ಳಲು ಧರ್ಮಸಿಂಗ್‌ಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮಟ್ಟಿಗೆ ಸಮ್ಮಿಶ್ರ ಸರ್ಕಾರ ಒಂದು ಪ್ರಯೋಗ. ಈ ಸರ್ಕಾರದ ಸಾಧನೆಗಳನ್ನು ತಕ್ಷಣದ ಅತಿ ಕಡಿಮೆ ಕಾಲಾವಧಿಯಲ್ಲಿ ಅಳೆಯಲಾಗದು. ತಳವೂರಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು. ಸಾಕಷ್ಟು ಕಾಲಾವಧಿ ನೀಡಿದ ನಂತರವೇ ಸರ್ಕಾರದ ಸಾಧನೆಗಳ ವಿಶ್ಲೇಷಣೆ ಸಾಧ್ಯ ಎಂದು ಬುಧವಾರ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಕೃಷ್ಣ ತಿಳಿಸಿದರು.

ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆಯ ಕುರಿತು ಪ್ರತಿಕ್ರಿಯಿಸಿದ ಕೃಷ್ಣ - ಸಮ್ಮಿಶ್ರ ಸರ್ಕಾರದಲ್ಲಿ ಇಂಥ ಸಂಗತಿಗಳು ಸಾಮಾನ್ಯ ಎಂದರು. ಕನಿಷ್ಠ 6 ತಿಂಗಳಾದರೂ ಧರ್ಮಸಿಂಗ್‌ ಸರ್ಕಾರಕ್ಕೆ ನೆಲೆ ಕಂಡುಕೊಳ್ಳಲು ಅವಕಾಶ ನೀಡಬೇಕು ಎಂದರು.

ಮತ್ತೆ ಮೈದಾನಕ್ಕೆ : ಕಾಂಗ್ರೆಸ್‌ ಪಕ್ಷಕ್ಕೆ ಬಲ ತುಂಬಲು ಅಕ್ಟೊ ೕಬರ್‌ 2ರಿಂದ ಎಸ್ಸೆಂ.ಕೃಷ್ಣ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಬಗೆಗೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿನ ಗೊಂದಲ ನಿವಾರಣೆಗೆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಈ ಕೆಲಸಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ಜನಸ್ಪಂದನ, ಪಾಂಚಜನ್ಯ ಮತ್ತಿತರ ಹೆಸರಲ್ಲಿ ಕೃಷ್ಣ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರು. ಮೈದಾನ ರಾಜಕೀಯವನ್ನು ಕ್ಷಷ್ಣ ತಮ್ಮ ರಾಜಕೀಯ ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

(ಏಜನ್ಸೀಸ್‌)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+