ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹಸಿರು ನಿಶಾನೆ
ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹಸಿರು ನಿಶಾನೆ
ಸ್ಥಳ ಸೂಚಿಸಿದಲ್ಲಿ ಪರಿಶೀಲನೆಗೆ ಸಿದ್ಧವೆಂದು ಮುಖ್ಯ ನ್ಯಾಯಮೂರ್ತಿಗಳಿಂದ ಧರ್ಮಸಿಂಗ್‌ಗೆ ಪತ್ರ.
ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಈ ಭಾಗದಲ್ಲಿ ಪೀಠ ಸ್ಥಾಪಿಸಬೇಕೆಂದು ಮೂರು ದಶಕಗಳಿಂದ ನಡೆಸಲಾಗುತ್ತಿದ್ದ ಹೋರಾಟಕ್ಕೆ ಈಗ ಫಲ ದೊರೆದಿದೆ. ಈ ಬಗೆಗೆ ಮುಖ್ಯಮಂತ್ರಿ ಧರ್ಮಸಿಂಗ್‌ಗೆ ಎರಡು ಪುಟದ ಪತ್ರ ಬರೆದಿರುವ ನ್ಯಾಯಮೂರ್ತಿ ಎಸ್.ಕೆ.ಜೈನ್, ಪೀಠ ಸ್ಥಾಪನೆಗೆ ಸೂಕ್ತ ಸ್ಥಳವನ್ನು ಅಯ್ಕೆ ಮಾಡಿದರೆ ಹೈಕೋರ್ಟ್ ಪರಿಗಣಿಸಲಿದೆ ಎಂದಿದ್ದಾರೆ.
ದೂರದ ಉತ್ತರ ಕರ್ನಾಟಕದ ಕಕ್ಷಿದಾರರ ಸಮಸ್ಯೆಗಳ ಅರಿವಿದ್ದು, ಪೀಠ ಸ್ಥಾಪನೆ ಬೇಡಿಕೆಯನ್ನು ಎಂದೂ ತಿರಸ್ಕರಿಸಿರಲಿಲ್ಲ. ಮಧುರೈನಲ್ಲಿ ಪೀಠ ಸ್ಥಾಪನೆಗೆ ನಾನೇ ಅನುಮತಿ ನೀಡಿದ್ದೆ. ಪೀಠ ಸ್ಥಾಪನೆ ಬಗೆಗೆ ಯಾವುದೇ ಅನುಮಾನ ಬೇಡ ಎಂದು ತಿಳಿಸಿದ್ದಾರೆ.
ಧಾರವಾಡ ವಕೀಲರ ಸಂಘ ನ್ಯಾಯಮೂರ್ತಿಗಳ ನಿರ್ಧಾರವನ್ನು ಸ್ವಾಗತಿಸಿದೆ. ಪ್ರಸ್ತುತ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಚೆಂಡು ಸರಕಾರದ ಅಂಗಳದಲ್ಲಿದೆ. ಸರಕಾರ ಮೀನಾಮೇಷ ಎಣಿಸದೇ, ಈ ಭಾಗದ ಜನರ ಬಹುದಿನಗಳ ಕನಸಿಗೆ ಜೀವತುಂಬಬೇಕೆಂದು ಸಂಘ ಒತ್ತಾಯಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications