ಬೆಂಗಳೂರಿನ ಅತಿದೊಡ್ಡ ಬಡಾವಣೆ ನಿರ್ಮಾಣಕ್ಕೆ ಪ್ರಾಧಿಕಾರ ಸಿದ್ಧತೆ
ಬೆಂಗಳೂರಿನ ಅತಿದೊಡ್ಡ ಬಡಾವಣೆ ನಿರ್ಮಾಣಕ್ಕೆ ಪ್ರಾಧಿಕಾರ ಸಿದ್ಧತೆ
2005ರ ಜನವರಿ 15ರಿಂದ ಅರ್ಕಾವತಿ ಬಡಾವಣೆಯ ನಿವೇಶನಗಳ ಹಂಚಿಕೆ
50 ಸಾವಿರ ನಿವೇಶನಗಳ ಮಾದರಿ ಬಡಾವಣೆಯನ್ನು ನಿರ್ಮಿಸಲು ಬಿಡಿಎ ಉದ್ದೇಶಿಸಿದೆ. ಪರಿಸರ ಸ್ನೇಹಿಯಾಗಿರುವ ನೂತನ ಬಡಾವಣೆ ರಚನೆ ಪ್ರಕ್ರಿಯೆ 2005ರ ಜುಲೈ ವೇಳೆಗೆ ಪ್ರಾರಂಭವಾಗಬಹುದು ಎಂದು ಧರ್ಮಸಿಂಗ್ ಹೇಳಿದರು. ಬಿಡಿಎ ಹಂಚಲು ಉದ್ದೇಶಿಸಿರುವ 50 ಸಾವಿರ ನಿವೇಶನಗಳ ಸ್ಥಳ ಹಾಗೂ ದರವನ್ನು ತಿಳಿಸಲು ನಿರಾಕರಿಸಿದ ಅವರು- ಅರ್ಕಾವತಿ ಬಡಾವಣೆಯ ನಿವೇಶಗಳ ಹಂಚಿಕೆ 2005ರ ಜನವರಿ 15ರೊಳಗೆ ಪ್ರಾರಂಭವಾಗುತ್ತದೆ ಎಂದರು.
ಈ ಹಿಂದೆ ಎಸ್. ಎಂ.್ ಕೃಷ್ಣ ಸರ್ಕಾರದಲ್ಲಿ ಕರೆಯಲಾಗಿದ್ದ 58 ಕೋಟಿ ರೂಪಾಯಿಗಳ ಟೆಂಡರ್ ತುಂಬ ದುಬಾರಿಯಾಗಿ ಪರಿಣಮಿಸಿತ್ತು. ನೀರು ಸರಬರಾಜು, ರಸ್ತೆ ನಿರ್ಮಾಣಗಳೆಲ್ಲ ತುಂಡು ಗುತ್ತಿಗೆ ಕೊಡುವುದರಿಂದ ಸರಿಯಾಗಿ ಕೆಲಸವಾಗುವುದಿಲ್ಲ. ಹೀಗಾಗಿ ಅದನ್ನೆಲ್ಲ ಕೈಬಿಟ್ಟು ತಜ್ಞರ ಸಲಹೆ ಪಡೆದು ನಿವೇಶನ ರೂಪು ರೇಷೆ ಸಂಪೂರ್ಣ ಬದಲಿಸುವಂತೆ ಹಾಗೂ ಬಡಾವಣೆ ನಿರ್ಮಾಣಕ್ಕೆ ಹೊಸದಾಗಿ ಟೆಂಡರ್ ಕರೆಯುವಂತೆ ಬಿಡಿಎ ಆಯುಕ್ತರಿಗೆ ಆದೇಶಿಸಿರುವುದಾಗಿ ಧರ್ಮಸಿಂಗ್ ಹೇಳಿದರು.
ಉತ್ತರ ಪ್ರದೇಶ ಸರ್ಕಾರಿ ಸಂಸ್ಥೆಯು ಬೆಂಗಳೂರಿನಲ್ಲಿ ಮೂರು ಮೇಲು ಸೇತುವೆ ರಸ್ತೆಗಳ ಕಾಮಗಾರಿ ಕಾರ್ಯಗಳ ಗುತ್ತಿಗೆ ಪಡೆದಿದೆ. ಈಗ ಉಕ್ಕಿನ ದರ 12000 ದಿಂದ 31000 ರು.ಗೆ ಏರಿಕೆಯಾಗಿರುವುದರಿಂದ ಕಾಮಗಾರಿ ಕಾರ್ಯದ ಗುತ್ತಿಗೆ ಪಡೆದಿದೆಯಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ತಮಗೆ ಪತ್ರ ಬರೆದ್ದಿದ್ದಾರೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಧರ್ಮಸಿಂಗ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications