ಮಧ್ಯಪ್ರದೇಶಕ್ಕೆ ಬನ್ನಿ , ವಿಪ್ರೋಗೆ ರತ್ನಗಂಬಳಿ ಹಾಸಿದ ಉಮಾಭಾರತಿ
ಮಧ್ಯಪ್ರದೇಶಕ್ಕೆ ಬನ್ನಿ , ವಿಪ್ರೋಗೆ ರತ್ನಗಂಬಳಿ ಹಾಸಿದ ಉಮಾಭಾರತಿ
ಮೂಲಭೂತ ವ್ಯವಸ್ಥೆಗಳ ಪರಿಶೀಲನೆಯ ನಂತರ ಮಧ್ಯಪ್ರದೇಶಕ್ಕೆ ಹೋಗುವ ಚಿಂತನೆ -ಪ್ರೇಂಜಿ
ಮಧ್ಯಪ್ರದೇಶದಲ್ಲಿ ವಿಪ್ರೋದ ಕಾರ್ಯಾಚರಣೆ ಶುರು ಮಾಡುವ ಬಗ್ಗೆ ಅಜೀಂ ಪ್ರೇಂಜಿ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಮೂಲಭೂತ ವ್ಯವಸ್ಥೆಗಳ ಪರಿಶೀಲನೆಗಾಗಿ ಮಧ್ಯಪ್ರದೇಶಕ್ಕೆ ತಂಡವೊಂದನ್ನು ಕಳುಹಿಸುವುದಾಗಿ ತಮಗೆ ಹೇಳಿರುವುದು ಮಧ್ಯಪ್ರದೇಶ ಮುಖ್ಯಮಂತ್ರಿ ಉಮಾ ಭಾರತಿ ಮಂಗಳವಾರ (ಆ.17) ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನ ಸರ್ಜಾಪುರದಲ್ಲಿನ ವಿಪ್ರೋ ಕೇಂದ್ರ ಕಚೇರಿಯಲ್ಲಿ ವಿಪ್ರೋತ್ತಮ ಪ್ರೇಂಜಿ ಜೊತೆ ಸುಮಾರು 1 ತಾಸು ಮಾತುಕತೆ ನಡೆಸಿದ ನಂತರ ಉಮಾ ಭಾರತಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನಿಂದಾಚೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ವಿಪ್ರೋ ಬಯಸಿದೆಯೆಂದು ನಾವು ಕೇಳಿದ್ದೇವೆ. ಆ ಕಾರಣದಿಂದಲೇ ಮಧ್ಯಪ್ರದೇಶಕ್ಕೆ ಅವರನ್ನು ಆಹ್ವಾನಿಸಲು ಬಯಸಿದ್ದೇವೆ. ಭೋಪಾಲ್ ಹಾಗೂ ಇಂದೋರ್‌ನಲ್ಲಿ ಅವರು ಕಾರ್ಯಾಚರಣೆ ಶುರು ಮಾಡಬಹುದು ಎಂದು ಉಮಾ ಭಾರತಿ ಹೇಳಿದರು.
ಮಧ್ಯಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಸ್ನೇಹಪರ ವಾತಾವರಣವಿದೆ. ಭೂಪಾಲ್ ಹಾಗೂ ಇಂದೋರ್‌ನಲ್ಲಿ ಐಟಿ ಕಂಪನಿಗಳು ಬಯಸಿದಲ್ಲಿ ಭೂಮಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಉಮಾ ಭಾರತಿ ಹೇಳಿದರು.
ರಾಜ್ಯದಿಂದ ಹೊರಗೆ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಲು ವಿಪ್ರೋ ಹಾಗೂ ಇನ್ಫೋಸಿಸ್ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಉಮಾ ಭಾರತಿಯವರ ಪ್ರಯತ್ನಗಳು ಮಹತ್ವ ಪಡೆದುಕೊಂಡಿವೆ. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ್ಫಐಟಿ ನೀತಿ ಹಾಗೂ ಬೆಂಗಳೂರಿನಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಇನ್ಫೋಸಿಸ್ ಹಾಗೂ ವಿಪ್ರೊ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿವೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications