ಕಂಠಮಟ್ಟಕ್ಕೆ ಕನ್ನಂಬಾಡಿ : ತಗ್ಗುಪ್ರದೇಶದ ಜನರಿಗೆ ಪ್ರವಾಹದ ಆತಂಕ
ಕಂಠಮಟ್ಟಕ್ಕೆ ಕನ್ನಂಬಾಡಿ : ತಗ್ಗುಪ್ರದೇಶದ ಜನರಿಗೆ ಪ್ರವಾಹದ ಆತಂಕ
122.72 ಅಡಿ ಮುಟ್ಟಿದ ಕೃಷ್ಣರಾಜಸಾಗರ ! ಅದು ಜಲ ವೈಭವ !!
ಜಲಾಶಯ ಅಪಾಯದ ಮಟ್ಟ ತಲುಪಿರುವ ಕಾರಣ ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಹರಿದು ಬಿಡುವ ಸಾಧ್ಯತೆಗಳಿವೆ. ಸದ್ಯಕ್ಕೆ ನಾಲೆಗಳಿಗೆ ಮಾತ್ರ 4,945 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ. ಮುಖ್ಯಮಂತ್ರಿ ಧರ್ಮಸಿಂಗ್ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದಾರೆ.
ವರುಣನ ಕ್ಷಪೆಯಿಂದ ಕೆ.ಆರ್.ಎಸ್ ಭರ್ತಿಯಾಗುತ್ತಿದ್ದು, ಕರ್ನಾಟಕ ಹಾಗು ತಮಿಳುನಾಡಿನ ನಡುವೆ ಕಾವೇರುತ್ತಿದ್ದ ‘ಕಾವೇರಿ’ ವಿವಾದ ಈ ವರ್ಷ ತಣ್ಣಗಾಗಲಿದೆ. ಮಂಡ್ಯ-ಮೈಸೂರು ಮಾತ್ರವಲ್ಲದೇ ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆಯೂ ಕೆ.ಆರ್.ಎಸ್ ಜಲಾಶಯ ತುಂಬಿದ ಕಾರಣ ಬಗೆಹರಿಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications