ಗೌಡರು ಹೇಳಿದ್ದೆಲ್ಲ ಸುಳ್ಳು! ಜನ ಪ್ರತಿನಿಧಿಗಳಿಗೆ ಎಸ್.ಎಂ. ಕೃಷ್ಣ ಪತ್ರ
ಗೌಡರು ಹೇಳಿದ್ದೆಲ್ಲ ಸುಳ್ಳು! ಜನ ಪ್ರತಿನಿಧಿಗಳಿಗೆ ಎಸ್.ಎಂ. ಕೃಷ್ಣ ಪತ್ರ
ದೇವೇಗೌಡರ ವಿರುದ್ಧ ಮುಂದುವರಿದ ಕೃಷ್ಣರ ವಾಗ್ದಾಳಿ.
ಕಳೆದ 5 ವರ್ಷಗಳ ಎಸ್ಸೆಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆ.12ರಂದು 29 ಪುಟಗಳ ಪತ್ರವನ್ನು ಮುಖ್ಯಮಂತ್ರಿ ಎನ್.ಧರ್ಮಸಿಂಗ್‌ರಿಗೆ ಬರೆದಿದ್ದರು.
ದೇವೇಗೌಡರ ಪತ್ರದಿಂದ ಕೆರಳಿ ಕೆಂಡಾಮಂಡಲವಾಗಿದ್ದ ಎಸ್ಸೆಂ.ಕೃಷ್ಣ - ದೇವೇಗೌಡರ ಆರೋಪಗಳು ರಾಜಕೀಯ ದ್ವೇಷದಿಂದ ಕೂಡಿವೆ ಎಂದು ಧರ್ಮಸಿಂಗ್‌ರಿಗೆ ಪ್ರತಿ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಗಳನ್ನು ಸೋಮವಾರ (ಆ.17) ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಕೃಷ್ಣ , ಗೌಡರ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದರು.
ಗೌಡರ ಪ್ರತಿ ಆರೋಪಕ್ಕೂ ಈ ಪತ್ರದಲ್ಲಿ ಉತ್ತರಿಸಿದ್ದೇನೆ. ಪತ್ರದ ಪ್ರತಿಗಳನ್ನು ಎಲ್ಲ ಪಕ್ಷಗಳ ಶಾಸಕರು, ಸಂಸದರು, ಗಣ್ಯರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖ ನಾಯಕರಿಗೆ ಕಳುಹಿಸುವುದಾಗಿ ಕೃಷ್ಣ ಹೇಳಿದರು. ಕೃಷ್ಣ ಅವರ ಪತ್ರ ಇಂಗ್ಲಿಷ್ ಹಾಗೂ ಕನ್ನಡದಲ್ಲಿದೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ
ದೇವೇಗೌಡರ ವಿರುದ್ಧ ಕೃಷ್ಣ ಬರೆದದ್ದೇನು ? ಇಲ್ಲಿದೆ ಪೂರ್ಣ ಕೃಷ್ಣಪತ್ರ
ಮುಖಪುಟ / ಕೃಷ್ಣಗಾರುಡಿ












Click it and Unblock the Notifications