ತುಂಗಭದ್ರಾ ಭರ್ತಿ ; ಜಲವಿದ್ಯುತ್ ಘಟಕಗಳಿಗೆ ಪೂರ್ಣಾವಧಿ ಕೆಲಸ
ತುಂಗಭದ್ರಾ ಭರ್ತಿ ; ಜಲವಿದ್ಯುತ್ ಘಟಕಗಳಿಗೆ ಪೂರ್ಣಾವಧಿ ಕೆಲಸ
ಲಿಂಗನಮಕ್ಕಿ ಶೇ.70ರಷ್ಟು ಭರ್ತಿ, ಕನ್ನಂಬಾಡಿಯಲ್ಲೂ ಜಲೋಲ್ಲಾಸ
ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಿರುವುದರಿಂದ ಭಾನುವಾರದಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ. ಆ.16ರ ಸೋಮವಾರವೂ ನೀರು ಹೊರಬಿಡುವುದನ್ನು ಮುಂದುವರಿಸಲಾಗುವುದು ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಆ.15ರ ಭಾನುವಾರ ಒಳ ಹರಿವಿನ ಪ್ರಮಾಣ 94 ಸಾವಿರ ಕ್ಯೂಸೆಕ್ಸ್‌ಗಳಷ್ಟಿತ್ತು .
ಪ್ರತಿವರ್ಷದ ಸ್ವಾತಂತ್ರ್ಯೋತ್ಸವ ದಿನದಂದು ಜಲಾಶಯದ ಕ್ರೆಸ್ಟ್‌ಗೇಟ್‌ಗಳನ್ನು ತೆರೆಯುವುದು ಸಂಪ್ರದಾಯ. ಈ ಸುಂದರ ದೃಶ್ಯವನ್ನು ನೋಡಲಿಕ್ಕೆ ಸುತ್ತಮುತ್ತಲ ಪ್ರದೇಶಗಳಿಂದ ನೂರಾರು ಮಂದಿ ಆಗಮಿಸುತ್ತಾರೆ. ಆದರೆ ಬರದ ಕಾರಣದಿಂದಾಗಿ ಮೂರು ವರ್ಷಗಳಿಂದ ಕ್ರೆಸ್ಟ್‌ಗೇಟ್‌ಗಳು ಬಂಧನಕ್ಕೊಳಗಾಗಿದ್ದವು. ಈ ಭಾರಿ ಬಂಧಮುಕ್ತಗೊಂಡ ಕ್ರೆಸ್ಟ್‌ಗೇಟ್-ಜಲವೈಭವವನ್ನು ನೋಡುವುದೇ ಒಂದು ಹಬ್ಬ .
ಬೆಳಕೋ ಬೆಳಕು : ತುಂಗಭದ್ರಾ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ತುಂಬುತ್ತಿರುವುದರಿಂದ ರಾಜ್ಯದ ಜಲ ವಿದ್ಯುತ್ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿವೆ. ಇದರಿಂದಾಗಿ ದಿನಕ್ಕೆ 376 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications