ತಿಪ್ಪಣ್ಣ ನೇಮಕಕ್ಕೆವಿರೋಧ; ಜೆಡಿಎಸ್ ತೊರೆದ ಕುರುಗೋಡು ಶಾಸಕ
ತಿಪ್ಪಣ್ಣ ನೇಮಕಕ್ಕೆವಿರೋಧ; ಜೆಡಿಎಸ್ ತೊರೆದ ಕುರುಗೋಡು ಶಾಸಕ
ದೇವೇಗೌಡರ ನಿರ್ಧಾರಕ್ಕೆ ಸಿದ್ಧರಾಮಯ್ಯ ಬೆಂಬಲಿಗರ ಅಸಮಾಧಾನ
ತಿಪ್ಪಣ್ಣ ಅವರು ಕಳೆದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದರು. ಅಂಥವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಸಹಿಸಿಕೊಳ್ಳುವುದು ಸಾಧ್ಯವಿಲ್ಲ . ಈ ನೇಮಕವನ್ನು ಪ್ರತಿಭಟಿಸಿ ಜಾತ್ಯತೀತ ಜನತಾದಳದ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಕುರುಗೋಡು ಶಾಸಕ ಎನ್. ಸೂರ್ಯನಾರಾಯಣ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಂ.ಪಿ.ಪ್ರಕಾಶ್‌ರಿಗೆ ತಮ್ಮ ರಾಜೀನಾಮೆ ಪತ್ರಗಳನ್ನು ರವಾನಿಸಿರುವುದಾಗಿ ಸೂರ್ಯನಾರಾಯಣ ರೆಡ್ಡಿ ತಿಳಿಸಿದ್ದಾರೆ.
ಈ ನಡುವೆ ತಿಪ್ಪಣ್ಣನವರ ನೇಮಕದ ವಿರುದ್ಧ ಜಾತ್ಯತೀತ ಜನತಾದಳ ಪಕ್ಷದ ಆಂತರಿಕ ವಲಯದಲ್ಲಿ ಸಣ್ಣ ಪ್ರಮಾಣದ ಅಸಮಾಧಾನ ವ್ಯಕ್ತವಾಗಿದೆ. ಸಿದ್ಧರಾಮಯ್ಯ ಅವರನ್ನು ಮಟ್ಟ ಹಾಕಲೆಂದೇ ತಿಪ್ಪಣ್ಣನವರನ್ನು ದೇವೇಗೌಡರು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications