ಗೌಡರ 29 ಪುಟ ಪತ್ರಕ್ಕೆ ಕೃಷ್ಣರ 19 ಪುಟ ಪ್ರತಿಕ್ರಿಯೆ ; ಪಾಪ ಸಿಂಗ್‌!

ಗೌಡರ 29 ಪುಟ ಪತ್ರಕ್ಕೆ ಕೃಷ್ಣರ 19 ಪುಟ ಪ್ರತಿಕ್ರಿಯೆ ; ಪಾಪ ಸಿಂಗ್‌!
ಸುಳ್ಳುಬುರುಕ ಗೌಡರಿಂದ ಕಾಂಗ್ರೆಸ್‌ ತೇಜೋವಧೆ ಯತ್ನ - ಕೃಷ್ಣ ಅಳಲು

ಬೆಂಗಳೂರು : ವಿವಿಧ ಹಗರಣಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ನಡುವಣ ಪತ್ರ ಸಮರ ಮುಂದುವರೆದಿದ್ದು , ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಗರಣಕ್ಕೆ ಸಂಬಂಧಿಸಿದಂತೆ ದೇವೇಗೌಡರ ಆರೋಪಗಳು ಬುಡತಳವಿಲ್ಲದವು ಎಂದು ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಪತ್ರ ಮುಖೇನ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ರಿಗೆ ಬಿಡಿಎ ಹಗರಣ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವ 19 ಪುಟಗಳ ಪತ್ರವನ್ನು ಎಸ್ಸೆಂ.ಕೃಷ್ಣ ಆ.12ರಂದು ಬರೆದಿದ್ದು , ಈ ಪತ್ರದಲ್ಲಿ ದೇವೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ. ದೇವೇಗೌಡರು ತಿಳಿಸಿರುವಂತೆ ಬಡಾವಣೆಗಳನ್ನು ನಿರ್ಮಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಹಾಗೂ ತುಂಡು ಗುತ್ತಿಗೆಗಳನ್ನು ನೀಡುವಲ್ಲಿ ಯಾವುದೇ ಅವ್ಯವಹಾರ ನೀಡಿಲ್ಲ . ಇದರಲ್ಲಿ ನನ್ನ ಕೈವಾಡವೇನೂ ಇಲ್ಲ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ದೇವೇಗೌಡರು ಸುಳ್ಳು ಸುಳ್ಳೇ ಆರೋಪಿಸಿದ್ದಾರೆ. ಸೋನಿಯಾ ನೇತೃತ್ವದ ಕಾಂಗ್ರೆಸ್‌ನ ವರ್ಚಸ್ಸನ್ನು ಹಾಳು ಮಾಡುವುದು ಅವರ ಉದ್ದೇಶ ಎಂದು ಕೃಷ್ಣ ತಮ್ಮ ಪತ್ರದಲ್ಲಿ ಆಪಾದಿಸಿದ್ದಾರೆ.

ಗೌಡರ ಆರೋಪಗಳು ಕ್ರೂರತನದಿಂದ ಕೂಡಿವೆ. ಕಾಂಗ್ರೆಸ್‌ ಮಾತ್ರವಲ್ಲದೆ ತಮ್ಮ ಚಾರಿತ್ರ್ಯ ವಧೆ ಮಾಡುವ ಪ್ರಯತ್ನದಲ್ಲೂ ದೇವೇಗೌಡ ತೊಡಗಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಕೃಷ್ಣ ಹೇಳಿದ್ದಾರೆ.

ಈ ಮುನ್ನ ಬಿಡಿಎಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು , ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮುಖ್ಯಮಂತ್ರಿ ಧರ್ಮಸಿಂಗ್‌ರಿಗೆ 29 ಪುಟಗಳ ಪತ್ರ ಬರೆದಿದ್ದರು. ಬೆಂಗಳೂರು-ಮೈಸೂರು ಕಾರಿಡಾರ್‌ ಯೋಜನೆಗೆ ಸಂಬಂಧಿಸಿದಂತೆಯೂ ದೇವೇಗೌಡ-ಕೃಷ್ಣ ನಡುವೆ ಪತ್ರ ಸಮರ ಚಾಲ್ತಿಯಲ್ಲಿದೆ .

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+