ನರಹಂತಕ ವೀರಪ್ಪನ್‌ನ ಹಿಡಿಯಿರಿ, ಮುಜುಗರ ತಪ್ಪಿಸಿ-ಧರ್ಮಸಿಂಗ್
ನರಹಂತಕ ವೀರಪ್ಪನ್‌ನ ಹಿಡಿಯಿರಿ, ಮುಜುಗರ ತಪ್ಪಿಸಿ-ಧರ್ಮಸಿಂಗ್
ನಕ್ಸಲೀಯ ಚಟುವಟಿಕೆಗಳ ಚಿವುಟಿ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
ವೀರಪ್ಪನ್‌ನನ್ನು ಹಿಡಿಯಲು ಹೊಸ ದಾರಿಗಳನ್ನು ಹುಡುಕಿರಿ. ದುಡ್ಡು ಎಷ್ಟು ಖರ್ಚಾದರೂ ಚಿಂತೆಯಿಲ್ಲ . ಒಟ್ಟಿನಲ್ಲಿ ವೀರಪ್ಪನ್‌ನನ್ನು ಹಿಡಿಯುವ ಮೂಲಕ ರಾಜ್ಯ ಸರ್ಕಾರವನ್ನು ಮುಜುಗರದಿಂದ ಪಾರು ಮಾಡಿ ಎಂದು ಧರ್ಮಸಿಂಗ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಆ.11ರಂದು ನಡೆದ ಕಾನೂನು ಸುವ್ಯವವಸ್ಥೆ ಮತ್ತು ಅಪರಾಧಗಳ ಕುರಿತ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಧರ್ಮಸಿಂಗ್ ಮಾತನಾಡುತ್ತಿದ್ದರು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ನಕ್ಸಲೀಯ ಚಟುವಟಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವಂತೆ ಧರ್ಮಸಿಂಗ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸುಶೀಲ್ ಎನ್ ಬೋರ್ಕರ್- ವೀರಪ್ಪನ್ ಬಂಧನಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಭರವಸೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್












Click it and Unblock the Notifications