ಬೆಂಗಳೂರಿನ ‘ಸಾಂಸ್ಕೃತಿಕ ಜೀವನಾಡಿ’ ಶತಾಯುಷಿ ನಿಟ್ಟೂರು ಇನ್ನಿಲ್ಲ
ಬೆಂಗಳೂರಿನ ‘ಸಾಂಸ್ಕೃತಿಕ ಜೀವನಾಡಿ’ ಶತಾಯುಷಿ ನಿಟ್ಟೂರು ಇನ್ನಿಲ್ಲ
ನಿಟ್ಟೂರರ ನಿಧನದೊಂದಿಗೆ ಮರೆಯಾದ ಬೆಂಗಳೂರಿನ ಮತ್ತೊಂದು ಹಳೆಬೇರು
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದ ನಿಟ್ಟೂರು ಉದ್ಯಾನನಗರಿಯ ಸಾಂಸ್ಕೃತಿಕ ಜೀವನಾಡಿಗಳಲ್ಲಿ ಒಬ್ಬರಾಗಿದ್ದರು. ನೂರರ ಇಳಿಸಂಜೆಯಲ್ಲೂ ಸಾರ್ವಜನಿಕ ಸಭೆಗಳಲ್ಲಿ ಆಸಕ್ತಿ ಹಾಗೂ ಉತ್ಸುಕತೆಯಿಂದ ಭಾಗವಹಿಸುತ್ತಿದ್ದ ನಿಟ್ಟೂರರದು ರಾಜಧಾನಿಯ ಪರಿಚಿತ ಮುಖಗಳಲ್ಲೊಂದು.
ಮಹಾತ್ಮಗಾಂಧಿ ಕರೆಯ ಮೇರೆಗೆ ಸ್ವಾತಂತ್ರ್ಯಚಳವಳಿಗೆ ಧುಮುಕಿದ ನಿಟ್ಟೂರರು ಜೈಲುವಾಸವನ್ನೂ ಅನುಭವಿಸಿದ್ದರು. 1964 ಮತ್ತು 68ರಲ್ಲಿ ದೇಶದ ಪ್ರಥಮ ಜಾಗೃತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬೆಂಗಳೂರಿನ ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ಗೋಖಲೆ ಸಾರ್ವಜನಿಕ ಸಂಸ್ಥೆಯಾಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು, ಅನೇಕ ಸಂಘಸಂಸ್ಥೆಗಳ ಹುಟ್ಟು-ಬೆಳವಣಿಗೆಗೆ ಕಾರಣರಾಗಿದ್ದರು.
1963 ರಲ್ಲಿ ಮೈಸೂರು ರಾಜ್ಯದ ಹಂಗಾಮಿ ರಾಜ್ಯಪಾಲರಾಗಿಯೂ ನಿಟ್ಟೂರು ಶ್ರೀನಿವಾಸರಾವ್ ಕಾರ್ಯ ನಿರ್ವಹಿಸಿದ್ದರು. ನಿಟ್ಟೂರರ ನಿಧನಕ್ಕೆ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
(ಪಿಟಿಐ)
ಪೂರಕ ಓದಿಗೆ-
ನಿಟ್ಟೂರು : ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು
ಮುಖಪುಟ / ವಾರ್ತೆಗಳು












Click it and Unblock the Notifications