ಬೆಳೆವಿಮೆ: ರಾಜ್ಯಸರ್ಕಾರದ ಪಾಲಿನ 122.13 ಕೋಟಿ ರು. ಬಿಡುಗಡೆ
ಬೆಳೆವಿಮೆ: ರಾಜ್ಯಸರ್ಕಾರದ ಪಾಲಿನ 122.13 ಕೋಟಿ ರು. ಬಿಡುಗಡೆ
ಕೃಷಿವಿಮೆ ವ್ಯಾಪ್ತಿಗೆ ಕಬ್ಬನ್ನೂ ತರಲು ರಾಜ್ಯ ಸರ್ಕಾರದ ಚಿಂತನೆ
2002-03ರ ಅವಧಿಯಲ್ಲಿ ರೈತರ ಬೆಳೆ ವಿಮಾ ಮೊತ್ತದಲ್ಲಿ ರಾಜ್ಯದ ಪಾಲನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಸಂಬಂಧ 122.13 ಕೋಟಿ ರುಪಾಯಿಯನ್ನು ಆಗಸ್ಟ್ 10ರಂದೇ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಶ್ರೀನಿವಾಸಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಬೆಳೆವಿಮೆ ಯೋಜನೆಯಲ್ಲಿ 13 ಬೆಳೆಗಳಿದ್ದು , ವಿಮಾ ವ್ಯಾಪ್ತಿಗೆ ಕಬ್ಬನ್ನೂ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಶ್ರೀನಿವಾಸಗೌಡ ಹೇಳಿದರು. ಕನಿಷ್ಠ ಬೆಂಬಲ ಬೆಲೆ ದೊರೆಯುವ ಬೆಳೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ಪಟ್ಟಿ ಆಗಸ್ಟ್ ಅಂತ್ಯದೊಳಗೆ ಸಿದ್ಧವಾಗಬಹುದೆಂದು ನಿರೀಕ್ಷಿಸಲಾಗಿದೆ ಎಂದರು.
ರಾಜ್ಯದಲ್ಲಿ ಪ್ರಸಕ್ತ ಋತುವಿನಲ್ಲಿ ಶೇ.15ರಷ್ಟು ಮಳೆಯ ಕೊರತೆ ಕಂಡುಬಂದಿದೆ. ಮಳೆ ಬಿದ್ದಿರುವ ಕಡೆಯಲ್ಲೆಲ್ಲ ಉಳುಮೆ ಹಾಗೂ ಬಿತ್ತನೆ ಪ್ರಗತಿಯಲ್ಲಿದೆ. ರೈತರಿಗೆ ಬೀಜ ಮತ್ತು ಗೊಬ್ಬರಕ್ಕಾಗಿ ಸರ್ಕಾರ 70 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಸಚಿವ ಶ್ರೀನಿವಾಸಗೌಡ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications