‘ಕಾಂಗ್ರೆಸ್ ಸಮಾಧಿಯ ಮೇಲೆ ದೇವೇಗೌಡರ ದಳಸರ್ಕಾರದ ಕನಸು’
‘ಕಾಂಗ್ರೆಸ್ ಸಮಾಧಿಯ ಮೇಲೆ ದೇವೇಗೌಡರ ದಳಸರ್ಕಾರದ ಕನಸು’
ದೇವೇಗೌಡರು ದಾಳಿ ನಿಲ್ಲಿಸದಿದ್ದರೆ ಕಾಂಗ್ರೆಸ್‌ನಿಂದ ತಕ್ಕ ಕ್ರಮ -ಪೂಜಾರಿ ಎಚ್ಚರಿಕೆ
ದೇವೇಗೌಡ ಕಾಂಗ್ರೆಸ್ ಪಕ್ಷವನ್ನು ನಾಶಗೊಳಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ಜಾತ್ಯತೀತ ಜನತಾದಳದ ಸರ್ಕಾರವನ್ನು ಸ್ಥಾಪಿಸುವುದು ಅವರ ಗುರಿ ಎಂದು ಮಂಗಳವಾರ (ಆ.10) ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ಪೂಜಾರಿ ಆಪಾದಿಸಿದರು.
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ- ದೇವೇಗೌಡರು ನಿಕಟಪೂರ್ವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪದೇಪದೇ ಆರೋಪಗಳನ್ನು ಹೊರಿಸುತ್ತಿದ್ದಾರೆ. ಮೈಸೂರು-ಬೆಂಗಳೂರು ಕಾರಿಡಾರ್ ಯೋಜನೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ರೀತಿಯ ಆರೋಪ ಹಾಗೂ ಒತ್ತಾಯಗಳನ್ನು ಅವರು ನಿಲ್ಲಿಸದಿದ್ದರೆ ಕಾಂಗ್ರೆಸ್ ಪಕ್ಷ ತಕ್ಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮ್ಮಿಶ್ರ ಸರ್ಕಾರದ ಇತಿಮಿತಿಗಳನ್ನು ದೇವೇಗೌಡ ಅರ್ಥ ಮಾಡಿಕೊಳ್ಳಬೇಕು ಎಂದು ಪೂಜಾರಿ ಜಾತ್ಯತೀತ ದಳದ ವರಿಷ್ಠರಿಗೆ ಕಿವಿ ಮಾತು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications