ಜನತೆ ಕಷ್ಟಸುಖ ಅರಿಯಲು ಮನಮೋಹನ್‌ರಿಂದ ಜನತಾದರ್ಬಾರ್
ಜನತೆ ಕಷ್ಟಸುಖ ಅರಿಯಲು ಮನಮೋಹನ್‌ರಿಂದ ಜನತಾದರ್ಬಾರ್
ಪ್ರತಿದಿನ ನಾಗರಿಕರೊಂದಿಗೆ ಪ್ರಧಾನಿ ಭೇಟಿ, ಅಹವಾಲು ಕೇಳಿಕೆ
ಜನತೆಯನ್ನು ನೇರವಾಗಿ ಭೇಟಿಮಾಡಿ ಅವರ ಕುಂದುಕೊರತೆಗಳನ್ನು ಬಗೆಹರಿಸವುದೇ ಜನತಾ ದರ್ಬಾರ್‌ನ ಮುಖ್ಯ ಉದ್ದೇಶವಾಗಿದೆ. ಒಂದು ತಾಸು ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಜನರನ್ನು ಖುದ್ದು ಭೇಟಿ ಮಾಡಿ ಅವರ ಅಹವಾಲು ಆಲಿಸುವರು.
ಈಗಾಗಲೇ ಜನತಾ ದರ್ಬಾರ್ ಕಾರ್ಯಕ್ರಮ ಆರಂಭವಾಗಿದ್ದು , ಅನೇಕ ಸಭೆಗಳು ನಡೆದಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಈ ವಿಶಿಷ್ಠ ಕಾರ್ಯಕ್ರಮದ ಮೂಲಕ ಆರ್ಥಿಕ ಹಾಗೂ ರಾಜಕೀಯ ಪರಿಣಿತರೆಂದು ಹೆಸರಾದ ಮನಮೋಹನ್ ತಮ್ಮ ಮಾನವೀಯ ಮುಖವನ್ನೂ ಪ್ರದರ್ಶಿಸಿದ್ದಾರೆ.
ಮಾಜಿ ಪ್ರಧಾನಿಗಳಾದ ಜವಹರಲಾಲ ನೆಹರು ಮತ್ತು ಇಂದಿರಾಗಾಂಧಿರವರು ಜನತೆಯನ್ನು ನೇರವಾಗಿ ಭೇಟಿಮಾಡಿ, ಅವರ ಸಮಸ್ಯೆಗಳನ್ನು ಖುದ್ದು ಆಲಿಸುತ್ತಿದ್ದರು. ಈ ಪರಂಪರೆ ವಾಜಪೇಯಿ ಕಾಲದಲ್ಲಿ ಮುಂದುವರಿದಿತ್ತಾದರೂ, ಕಾಲಾಂತರದಲ್ಲಿ ಸ್ಥಗಿತಗೊಂಡಿತ್ತು .
ಕರ್ನಾಟಕದಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜನತಾ ದರ್ಶನ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications