ಬೆಂಗಳೂರಲ್ಲಿ 300ಎಕರೆ ನೆಲ ಕೊಡಿ, ಇಲ್ಲ ದಾರಿ ಬಿಡಿ -ಇನ್ಫೋಸಿಸ್
ಬೆಂಗಳೂರಲ್ಲಿ 300ಎಕರೆ ನೆಲ ಕೊಡಿ, ಇಲ್ಲ ದಾರಿ ಬಿಡಿ -ಇನ್ಫೋಸಿಸ್
ಇನ್ಫೋಸಿಸ್‌ನಿಂದ ಪ್ರತಿವರ್ಷ 8ರಿಂದ 10 ಸಾವಿರ ತಂತ್ರಜ್ಞರ ನೇಮಕ
ನಗರದಲ್ಲಿ 300 ಎಕರೆ ಭೂಮಿಯನ್ನು ನೀಡುವಂತೆ ಸರ್ಕಾರವನ್ನು ಸಂಪರ್ಕಿಸಿದ್ದೇವೆ. ಇದಲ್ಲದೆ ಮೈಸೂರಿನಲ್ಲಿ 50 ಎಕರೆ ಹಾಗೂ ಮಂಗಳೂರಿನಲ್ಲಿ 25 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆಯೂ ಕೋರಿದ್ದೇವೆ ಎಂದು ಇನ್ಫೋಸಿಸ್ ಅಧ್ಯಕ್ಷ ಹಾಗೂ ಸಿಇಒ ನಂದನ್ ನಿಲೇಕಣಿ ತಿಳಿಸಿದ್ದಾರೆ. ಆ.10ರಂದು ಮುಖ್ಯಮಂತ್ರಿ ಧರ್ಮಸಿಂಗ್‌ರೊಂದಿಗಿನ ಮಾತುಕತೆಯ ನಂತರ ನಿಲೇಕಣಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ನಮ್ಮ ಕೋರಿಕೆಯನ್ನು ಮನ್ನಿಸಿ ಭೂಮಿ ಮಂಜೂರು ಮಾಡುತ್ತದೆಂದು ಭಾವಿಸಿದ್ದೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ನಿಲೇಕಣಿ- ಪ್ರತಿವರ್ಷ 8ರಿಂದ 10 ಸಾವಿರ ತಂತ್ರಜ್ಞರನ್ನು ಇನ್ಫೋಸಿಸ್ ನೇಮಕ ಮಾಡಿಕೊಳ್ಳಲಿದೆ ಎಂದರು.
ಭೂಮಿ ಮಂಜೂರು ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದಲ್ಲಿ , ದೇಶದ ಇತರೆಡೆಗಳಲ್ಲಿ ಚಟುವಟಿಕೆಗಳನ್ನು ವಿಸ್ತರಿಸಲು ಇನ್ಫೋಸಿಸ್ ಹಿಂಜರಿಯುವುದಿಲ್ಲ . ಬೆಂಗಳೂರಿನಲ್ಲಿ ವಿಸ್ತರಣೆ ಸಾಧ್ಯವಿಲ್ಲ ಎಂದಾದರೆ, ಆ ವಿಸ್ತರಣೆ ಬೇರೆಡೆಯಲ್ಲಿ ನಡೆಯುತ್ತದೆ. ಉತ್ತರ ಪ್ರದೇಶ ಸರ್ಕಾರವ ನೋಯಿಡಾ ಪ್ರದೇಶದಲ್ಲಿ ಐಟಿ ಅಭಿವೃದ್ಧಿಗೆ ಹೆಚ್ಚು ಉತ್ಸುಕವಾಗಿದೆ. ಅದೇರೀತಿ ಪಶ್ಚಿಮಬಂಗಾಳ ಸರ್ಕಾರವೂ ಸವಲತ್ತುಗಳನ್ನು ಒದಗಿಸಲು ಮುಂದಾಗಿದೆ ಎಂದು ನಿಲೇಕಣಿ ತಿಳಿಸಿದರು.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications