ಕಾಂಗ್ರೆಸ್ ಹಾಗೂ ತಮ್ಮ ತೇಜೋವಧೆಗೆ ಪಿತೂರಿ : ಕೃಷ್ಣಯ್ಯ ಅಳಲು
ಕಾಂಗ್ರೆಸ್ ಹಾಗೂ ತಮ್ಮ ತೇಜೋವಧೆಗೆ ಪಿತೂರಿ : ಕೃಷ್ಣಯ್ಯ ಅಳಲು
ವಿವಾದಕ್ಕೆ ಕಾರಣವಾಗಿರುವ ಕಾರಿಡಾರ್ ಯೋಜನೆ ರದ್ದಿಗೆ ಸಲಹೆ
ವಿವಾದ ಮತ್ತು ಆರೋಪಕ್ಕೆ ಕಾರಣವಾಗಿರುವ ಬಿಎಂಐಸಿ ಯೋಜನೆಯನ್ನು ರದ್ದುಪಡಿಸಿ. ಯೋಜನೆಯ ಸಂಬಂಧ ವಶಪಡಿಸಿಕೊಂಡಿರುವ ರೈತರ ಜಮೀನುಗಳನ್ನು ಅವರಿಗೆ ಹಿಂತಿರುಗಿಸಿ ಎಂದು ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಬರೆದಿರುವ ಸೋಮವಾರ (ಆ.9) ಪತ್ರದಲ್ಲಿ ಎಸ್ಸೆಂ.ಕೃಷ್ಣ ಸಲಹೆ ಮಾಡಿದ್ದ್ದಾರೆ.
ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಎಲ್ಲ ಆರೋಪಗಳು ಆಧಾರ ರಹಿತ ಹಾಗೂ ದುರುದ್ದೇಶದಿಂದ ಕೂಡಿವೆ. ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲ್ ಅವರ ಅಧಿಕಾರಾವಧಿಯಲ್ಲಿಯೇ ಕಾರಿಡಾರ್ ಯೋಜನೆಗೆ ಅನುಮತಿ ನೀಡಲಾಗಿದೆ. ಹೀಗಿದ್ದೂ ವಿನಾ ಕಾರಣ ಕಾಂಗ್ರೆಸ್ ಹಾಗೂ ತಮ್ಮ ವಿರುದ್ಧ ಆಪಾದನೆ ಹೊರಿಸಲಾಗುತ್ತಿದೆ ಎಂದು ಕೃಷ್ಣ ಅಳಲು ತೋಡಿಕೊಂಡಿದ್ದಾರೆ.
ಈ ಮುನ್ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರಿಡಾರ್ ಯೋಜನೆಗೆ ಸಂಬಂಧ ವ್ಯಾಪಕ ಅವ್ಯವಹಾರ ನಡೆದಿದ್ದು , ಈ ಅವ್ಯವಹಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಧರ್ಮಸಿಂಗ್‌ರಿಗೆ ದೇವೇಗೌಡರು ಬರೆದಿರುವ 29 ಪುಟಗಳ ಪತ್ರ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಸಂಚಲನೆ ಉಂಟು ಮಾಡಿತ್ತು .
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications