ಐಟಿ ಅಭ್ಯುದಯಕ್ಕೆ ಎಲ್ಲ ಅನುಕೂಲ ಒದಗಿಸಲು ಸಿದ್ಧ -ಧರ್ಮಸಿಂಗ್
ಐಟಿ ಅಭ್ಯುದಯಕ್ಕೆ ಎಲ್ಲ ಅನುಕೂಲ ಒದಗಿಸಲು ಸಿದ್ಧ -ಧರ್ಮಸಿಂಗ್
ಮುಖ್ಯಮಂತ್ರಿಗಳೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸಿದ ಐಟಿ ದೊರೆಗಳ ಮೊಗದಲ್ಲಿ ನಗು
ಯಾವುದೇ ಕಾರಣಕ್ಕೂ ಐಟಿ ಕ್ಷೇತ್ರವನ್ನು ರಾಜ್ಯ ಸರ್ಕಾರ ಕಡೆಗಣಿಸುವುದಿಲ್ಲ . ಅದೇರೀತಿ ಐಟಿ ಅಭ್ಯುದಯಕ್ಕೆ ಸಾಧ್ಯವಿರುವ ಎಲ್ಲ ಅನುಕೂಲಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಧರ್ಮಸಿಂಗ್ ಮಂಗಳವಾರ ತಿಳಿಸಿದರು. ಬೆಂಗಳೂರಿನ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಮಂಗಳವಾರ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಧರ್ಮಸಿಂಗ್ ಈ ಭರವಸೆ ನೀಡಿದರು.
ಐಟಿ ಕ್ಷೇತ್ರದ ಪ್ರಮುಖರೊಂದಿಗೆ ಮುಕ್ತ ಹಾಗೂ ಪ್ರಾಮಾಣಿಕ ಮಾತುಕತೆ ನಡೆಸಿದ್ದೇವೆ. ರಸ್ತೆಗಳು, ಫ್ಲೈಓವರ್‌ಗಳು ಹಾಗೂ ಇನ್ನಿತರ ಮೂಲಭೂತ ವ್ಯವಸ್ಥೆಗಳ ಕುರಿತು ಚರ್ಚಿಸಿದ್ದೇವೆ. ಐಟಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕ್ರಮಗಳನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್ ಐಟಿ ಮುಖ್ಯಸ್ಥರೊಂದಿಗಿನ ಉಪಹಾರ ಕೂಟದ ನಂತರ ಸುದ್ದಿಗಾರರಿಗೆ ತಿಳಿಸಿದರು.
ರೈತರು ಹಾಗೂ ಗ್ರಾಮೀಣ ಪ್ರದೇಶದ ಜನತೆಯತ್ತ ಸರ್ಕಾರದ ಆದ್ಯತೆ ಸ್ಪಷ್ಟವಾಗಿದೆ. ಹಾಗೆಂದು ನಗರ ಪ್ರದೇಶದ ಅಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಧರ್ಮಸಿಂಗ್ ಹೇಳಿದರು.
ಪ್ರಮುಖ ಸಚಿವರು, ಅಧಿಕಾರಿಗಳು, ವಿಪ್ರೋತ್ತಮ ಅಜೀಂ ಪ್ರೇಂಜಿ, ಎಂಫಸಿಸ್‌ನ ರವಿ ರಾಮು, ಇನ್ಫೋಸಿಸ್ ಅಧ್ಯಕ್ಷ ಹಾಗೂ ಸಿಇಒ ನಂದನ್ ನೀಲೇಕಣಿ ಮತ್ತಿತರರು ಮುಖ್ಯಮಂತ್ರಿ ಉಪಹಾರಕೂಟದಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳೊಂದಿಗಿನ ಮಾತುಕತೆ ಫಲಪ್ರದವಾಗಿದೆ ಎಂದು ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ ತಿಳಿಸಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸೇವೆಗಳ ಮೇಲೆ ಹೇರಲಾಗಿರುವ (ಶೇ.12) ಮಾರಾಟ ತೆರಿಗೆಯ ಕುರಿತು ವಿಪ್ರೋ ಮುಖ್ಯಸ್ಥ ಪ್ರೇಂಜಿ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹಣಕಾಸು ಸಚಿವ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications