ಸಮ್ಮಿಶ್ರಸರ್ಕಾರ ವೈಫಲ್ಯ: ಆ.17ವಿಧಾನಸೌಧದೆದುರು ಬಿಜೆಪಿ ಧರಣಿ
ಸಮ್ಮಿಶ್ರಸರ್ಕಾರ ವೈಫಲ್ಯ: ಆ.17ವಿಧಾನಸೌಧದೆದುರು ಬಿಜೆಪಿ ಧರಣಿ
ಧರ್ಮಸಿಂಗ್‌ಗೆ ದೇವೇಗೌಡ ಬರೆದ ಪತ್ರ ಬಹಿರಂಗಪಡಿಸಲು ಆಗ್ರಹ
ಆ.17ರಂದು ಬಿಜೆಪಿ ನಡೆಸುವ ಧರಣಿಯ ಬಗೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ - ಹಿಂದಿನ ಕಾಂಗ್ರೆಸ್ ಸರಕಾರದ ಭೂಹಗರಣಗಳ ಬಗೆಗೆ ಮುಖ್ಯಮಂತ್ರಿ ಧರ್ಮಸಿಂಗ್‌ರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ 29 ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಮುಖ್ಯಮಂತ್ರಿ ಧರ್ಮಸಿಂಗ್ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಅಪವಿತ್ರ ಮೈತ್ರಿಯ ಪರಿಣಾಮ ಭ್ರಷ್ಟ ಸರಕಾರ ರೂಪುಗೊಂಡಿದೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ, ಕೇವಲ ಅಧಿಕಾರದಾಹದಿಂದ ದೇವೇಗೌಡರ ದಳ ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ ಎಂದು ಯಡಿಯೂರಪ್ಪ ಆಪಾದಾಸಿದರು.
ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಜನಪರ ಕೆಲಸಮಾಡಲು ಸಮ್ಮಿಶ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರದ ವೈಫಲ್ಯಗಳನ್ನು ಧರಣಿ ಮೂಲಕ ಬಿಜೆಪಿ ಎತ್ತಿ ಹಿಡಿಯುವುದಾಗಿ ಯಡಿಯೂರಪ್ಪ ತಿಳಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications