ಮಳೆ: ಉಡುಪಿ ಜಿಲ್ಲೆಯಲ್ಲಿ 4.65 ಕೋಟಿಗೂ ಹೆಚ್ಚು ಆಸ್ತಿಪಾಸ್ತಿ ಹಾನಿ

ಮಳೆ: ಉಡುಪಿ ಜಿಲ್ಲೆಯಲ್ಲಿ 4.65 ಕೋಟಿಗೂ ಹೆಚ್ಚು ಆಸ್ತಿಪಾಸ್ತಿ ಹಾನಿ
ಮರ, ದೂರವಾಣಿ-ವಿದ್ಯುತ್‌ ಕಂಬಗಳು ಬುಡಮೇಲು, ಮಳೆಪಾಲಾದ ಜರ್ಝರಿತ ಕಟ್ಟಡಗಳು

ಮಣಿಪಾಲ : ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 4.65 ಕೋಟಿ ರುಪಾಯಿಗಳಿಗೂ ಹೆಚ್ಚು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎಸ್‌.ಆರ್‌.ಉಮಾಶಂಕರ್‌ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಐದು ಶಾಲಾ ಕಟ್ಟಡಗಳು, 7 ದನದ ಕೊಟ್ಟಿಗೆಗಳು ಹಾಗೂ 162 ಕಟ್ಟಡಗಳು ಉಡುಪಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಕುಸಿದುಬಿದ್ದಿವೆ. ಅನೇಕ ಸೇತುವೆಗಳು ಹಾಗೂ ರಸ್ತೆಗಳಿಗೂ ಹಾನಿಯುಂಟಾಗಿದೆ. ಮಳೆಯಿಂದ ಉಂಟಾದ ನಷ್ಟವನ್ನು 4.65 ಕೋಟಿ ರುಪಾಯಿಗೂ ಹೆಚ್ಚು ಎಂದು ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಉಮಾಶಂಕರ್‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಅನೇಕ ಮರಗಳು, ಟೆಲಿಫೋನ್‌ ಕಂಬಗಳು, ವಿದ್ಯುತ್‌ ಕಂಬಗಳು ಮಳೆಯಿಂದಾಗಿ ಬುಡಮೇಲಾಗಿವೆ. ಕಳೆದ ನಾಲ್ಕು ದಿನಗಳಲ್ಲಿ - ಕಾರ್ಕಳದಲ್ಲಿ ಅತಿಹೆಚ್ಚು , 271.4 ಮಿಮೀ ಮಳೆಯಾಗಿದೆ. ಕುಂದಾಪುರದಲ್ಲಿ 261.2 ಮಿಮೀ ಹಾಗೂ ಉಡುಪಿ ತಾಲ್ಲೂಕಿನಲ್ಲಿ 166.5 ಮಿಮೀ ಮಳೆಯಾಗಿದೆ ಎಂದು ಉಮಾಶಂಕರ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+