ಮುಂದುವರಿದ ತೀರ್ಥಯಾತ್ರೆ ; ಶನಿವಾರ ಕೊಲ್ಲೂರಿಗೆ ಧರ್ಮಸಿಂಗ್
ಮುಂದುವರಿದ ತೀರ್ಥಯಾತ್ರೆ ; ಶನಿವಾರ ಕೊಲ್ಲೂರಿಗೆ ಧರ್ಮಸಿಂಗ್
ಮುಖ್ಯಮಂತ್ರಿಗಳಿಂದ ಮೂಕಾಂಬಿಕಾ ಸಭಾ ಭವನ ಉದ್ಘಾಟನೆ
ಶನಿವಾರ ಬೆಳಗ್ಗೆ ಜೆಟ್ ಏರ್‌ವೇಸ್‌ನ ವಿಮಾನದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್ ಬಜ್ಪೆಗೆ ಆಗಮಿಸುವರು. ಅಲ್ಲಿಂದ ಕೊಲ್ಲೂರಿಗೆ ತೆರಳುವ ಧರ್ಮಸಿಂಗ್, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಸಭಾ ಭವನ ಉದ್ಘಾಟಿಸುವರು. ಶನಿವಾರ ರಾತ್ರಿ ಕೊಲ್ಲೂರಿನಲ್ಲಿಯೇ ತಂಗುವ ಧರ್ಮಸಿಂಗ್, ಭಾನುವಾರ ಬೆಳಗ್ಗೆ ಬಜ್ಪೆಗೆ ಮರಳುವರು.
ಕೈಗಾರಿಕಾ ಸಚಿವ ಪಿ.ಜಿ.ಆರ್.ಸಿಂಧ್ಯಾ ಕೂಡ ಕೊಲ್ಲೂರಿನಲ್ಲಿ ನಡೆಯುವ ಮೂಕಾಂಬಿಕಾ ಸಭಾಭವನ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಹಾಜರಿರುವರು. ವಾರ್ತಾ ಮತ್ತು ಪ್ರಸಾರ ಇಲಾಖೆಯ ಪ್ರಕಟಣೆ ಈ ವಿಷಯ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications