ಮೂರು ತಿಂಗಳ ಸಚಿವ ಸಂಪುಟ ಅತಿ ಶೀಘ್ರ ವಿಸ್ತರಣೆ : ಧರ್ಮಸಿಂಗ್
ಮೂರು ತಿಂಗಳ ಸಚಿವ ಸಂಪುಟ ಅತಿ ಶೀಘ್ರ ವಿಸ್ತರಣೆ : ಧರ್ಮಸಿಂಗ್
ಮಾತುಕತೆಗಾಗಿ ಮುಂದಿನ ವಾರ ದೆಹಲಿಗೆ ತೆರಳುವ ನಿರೀಕ್ಷೆ
ಸಂಪುಟ ವಿಸ್ತರಣೆ ಪ್ರಕ್ರಿಯೆ ಚಾಲನೆಯಲ್ಲಿದೆ. ಶೀಘ್ರವೇ ಸಂಪುಟ ವಿಸ್ತರಿಸಲಾಗುವುದು ಎಂದು ಗುರುವಾರ (ಆ.5) ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸಿಂಗ್ ಹೇಳಿದರು. ಸಂಪುಟ ವಿಸ್ತರಣೆಗೆ ಕಾಲಮಿತಿ ಗೊತ್ತುಪಡಿಸಲು ಅವರು ನಿರಾಕರಿಸಿದರು.
ಸಂಪುಟ ವಿಸ್ತರಣೆಯ ನಂತರ ವಿವಿಧ ಮಂಡಳಿ ಹಾಗೂ ನಿಗಮಗಳ ಅಧ್ಯಕ್ಷರ ನೇಮಕದ ವಿಷಯಕ್ಕೆ ಗಮನ ನೀಡುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿದರು.
ಆ.4ರ ಗುರುವಾರ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕರೆಯ ಮೇರೆಗೆ ಅವರನ್ನು ಧರ್ಮಸಿಂಗ್ ಭೇಟಿಯಾಗಿದ್ದರು. ಈ ಭೇಟಿಯ ಹಿನ್ನೆಲೆಯಲ್ಲಿ ಸಂಪುಟ ಪುನರ್ರಚನೆಯ ಬಗ್ಗೆ ವ್ಯಾಪಕ ಕುತೂಹಲ ಮೂಡಿತ್ತು . ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ಅಧಿನಾಯಕಿಯಾಂದಿಗೆ ಮಾತುಕತೆಗಾಗಿ ಧರ್ಮಸಿಂಗ್ ಮುಂದಿನವಾರ ದೆಹಲಿಗೆ ತೆರಳುವ ನಿರೀಕ್ಷೆಯಿದೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications