ಪ್ರೇಂಜಿ, ನಾರಾಯಣಮೂರ್ತಿ ಜೊತೆ ಆ.10 ಧರ್ಮಸಿಂಗ್‌ ಮಾತು

ಪ್ರೇಂಜಿ, ನಾರಾಯಣಮೂರ್ತಿ ಜೊತೆ ಆ.10 ಧರ್ಮಸಿಂಗ್‌ ಮಾತು
ಐಟಿ ಹೀಟಿಗೆ ಕರಗಿದ ಸಿಂಗ್‌ರಿಂದ ‘ಧರ್ಮ’ ಸಂಧಾನಸಭೆಗೆ ಕರೆ.

ಬೆಂಗಳೂರು : ಕಂಪ್ಯೂಟರ್‌ ಹಾಗೂ ಸಾಫ್ಟ್‌ವೇರ್‌ ಸೇವೆಗಳ ಮೇಲೆ ಮಾರಾಟ ತೆರಿಗೆ ಹೆಚ್ಚಳವೂ ಸೇರಿದಂತೆ, ರಾಜ್ಯ ಸರ್ಕಾರದ ಇತ್ತೀಚಿನ ನೀತಿ ನಿಲುವುಗಳ ಬಗ್ಗೆ ರಾಜ್ಯದ ಮಾಹಿತಿ ತಂತ್ರಜ್ಞಾನ ವಲಯ ತೋಳೇರಿಸಿರುವ ಹಿನ್ನೆಲೆಯಲ್ಲಿ , ಆಗಸ್ಟ್‌ 10ರಂದು ಪ್ರಮುಖ ಐಟಿ ನಾಯಕರೊಂದಿಗೆ ಮಾತುಕತೆಗೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ವೇದಿಕೆ ಸಿದ್ಧಪಡಿಸಿದ್ದಾರೆ.

ಆಗಸ್ಟ್‌ 10ರಂದು ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ಕರೆದಿರುವ ವಿಷಯವನ್ನು ಮುಖ್ಯಮಂತ್ರಿ ಧರ್ಮಸಿಂಗ್‌ ಗುರುವಾರ (ಆ.5) ಸುದ್ದಿಗಾರರಿಗೆ ತಿಳಿಸಿದರು. ಈ ಸಭೆಯಲ್ಲಿ ಇನ್ಫೋಸಿಸ್‌ ರಾಜಗುರು ಎನ್‌.ಆರ್‌.ನಾರಾಯಣಮೂರ್ತಿ ಹಾಗೂ ಸಿಇಒ ನಂದನ್‌ ನೀಲೇಕಣಿ ಮತ್ತು ವಿಪ್ರೋತ್ತಮ ಅಜೀಂ ಪ್ರೇಂಜಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಧರ್ಮಸಿಂಗ್‌ ಹೇಳಿದರು.

ಕಳೆದ ತಿಂಗಳು ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಸಾಫ್ಟ್‌ವೇರ್‌ ಕ್ಷೇತ್ರದ ಮೇಲಿನ ಮಾರಾಟ ತೆರಿಗೆಯನ್ನು ಶೇ.12ಕ್ಕೆ ಹೆಚ್ಚಿಸಿದ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು . ಇದೇ ಸಮಯದಲ್ಲಿ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವುದರಿಂದ ತಮ್ಮ ಚಟುವಟಿಕೆಗಳನ್ನು ರಾಜ್ಯದಿಂದ ಹೊರಗೆ ವಿಸ್ತರಿಸುವುದಾಗಿ ವಿಪ್ರೋ ಹಾಗೂ ಇನ್ಫೋಸಿಸ್‌ ಧಮಕಿ ಹಾಕಿದ್ದವು. ಈ ಹಿನ್ನೆಲೆಯಲ್ಲಿ ಆ.10ರಂದು ಧರ್ಮಸಿಂಗ್‌ ಕರೆದಿರುವ ಸಭೆ ಕುತೂಹಲ ಕೆರಳಿಸಿದೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+