ರಾಜಕೀಯ ‘ಧರ್ಮ’ ಪಾಲನೆ ; ಆಲಮಟ್ಟಿಯಿಂದ ನೀರು ಹರಿಯಿತು!
ರಾಜಕೀಯ ‘ಧರ್ಮ’ ಪಾಲನೆ ; ಆಲಮಟ್ಟಿಯಿಂದ ನೀರು ಹರಿಯಿತು!
ಜಲಾಶಯದಿಂದ ಕೃಷ್ಣಾ ನದಿಗೆ 60 ಸಾವಿರ ಕ್ಯುಸೆಕ್ಸ್ ನೀರು
ಆಲಮಟ್ಟಿ ಜಲಾಶಯ ತುಂಬಿದ್ದು , ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹಿಸಲು ಸಾಧ್ಯವಿಲ್ಲದ ಕಾರಣ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. 60 ಸಾವಿರ ಕ್ಯುಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್ ತಿಳಿಸಿದ್ದು , ಸೋಮವಾರದಿಂದಲೇ (ಆ.1) ನೀರ ಹರಿವು ಪ್ರಾರಂಭವಾಗಿದೆ.
ವಿಧಾನ ಮಂಡಲದ ಉಭಯ ಸದನಗಳ ನಾಯಕರೊಂದಿಗಿನ ಚರ್ಚೆಯ ನಂತರ ಆಲಮಟ್ಟಿಯಿಂದ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೀರು ಬಿಡುಗಡೆ ಮಾಡಿರುವುದು ರಾಜಕೀಯ ಕ್ರಮವಲ್ಲ ಎಂದು ಧರ್ಮಸಿಂಗ್ ಸ್ಪಷ್ಟಪಡಿಸಿದ್ದಾರೆ.
ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು , ಪ್ರಸ್ತುತ ನೀರಿನ ಸಂಗ್ರಹ 519.17 ಮೀಟರ್ ಇದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications