ಬಡ ಹೃದ್ರೋಗಿಗಳಿಗಾಗಿ ಸೇಂಟ್‌ಜಾನ್ಸ್‌ಆಸ್ಪತ್ರೆಯ ‘ಹೃದಯಸ್ಪಂದನ’

ಬಡ ಹೃದ್ರೋಗಿಗಳಿಗಾಗಿ ಸೇಂಟ್‌ಜಾನ್ಸ್‌ಆಸ್ಪತ್ರೆಯ ‘ಹೃದಯಸ್ಪಂದನ’
ಪೇಸ್‌ಮೇಕರ್‌, ಕೊರೊನರಿ ಮತ್ತು ಪೆರಿಫೆರಲ್‌ ಸ್ಟೆಂಟ್ಸ್‌ ಚಿಕಿತ್ಸೆ ಲಭ್ಯ

ಬೆಂಗಳೂರು : ಬಡ ಹಾಗೂ ಅರ್ಹ ಹೃದ್ರೋಗಿಗಳಿಗೆ ಉಚಿತ ಸಲಹೆ ಹಾಗೂ ಚಿಕಿತ್ಸೆ ನೀಡುವ ‘ಹೃದಯ ಸ್ಪಂದನ’ ಯೋಜನೆಯನ್ನು ನಗರದ ಸೇಂಟ್‌ಜಾನ್ಸ್‌ ಆಸ್ಪತ್ರೆ ಪ್ರಾರಂಭಿಸಿದೆ.

‘ಹೃದಯ ಸ್ಪಂದನ’ ಯೋಜನೆಯಡಿ ಬಡ ಹೃದ್ರೋಗಿಗಳಿಗೆ ಸಲಹೆ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆ ಹಾಗೂ ಸಲಹೆ ಬಡರೋಗಿಗಳಿಗೆ ಉಚಿತವಾಗಿದ್ದು , ಅರ್ಹರಿಗೆ ರಿಯಾಯಿತಿ ದರದಲ್ಲೂ ಸಲಹೆ- ಚಿಕಿತ್ಸೆ ಲಭ್ಯವಿದೆ. ಪೇಸ್‌ಮೇಕರ್‌, ಕೊರೊನರಿ ಮತ್ತು ಪೆರಿಫೆರಲ್‌ ಸ್ಟೆಂಟ್ಸ್‌ ಇತ್ಯಾದಿ ಚಿಕಿತ್ಸೆಯೂ ಲಭ್ಯವಿದೆ.

ಹೃದ್ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಸೇಂಟ್‌ಜಾನ್ಸ್‌ ಆಸ್ಪತ್ರೆ ವಿವಿಧ ಮೂಲಗಳಿಂದ ನಿಧಿ ಸಂಗ್ರಹಿಸುತ್ತದೆ. ಚಿಕಿತ್ಸೆಯ ವೆಚ್ಚ ಹಾಗೂ ಇತರ ನಿರ್ವಹಣಾ ವೆಚ್ಚಗಳನ್ನು ಭರಿಸಲು ಬಡ ಹೃದ್ರೋಗಿಗಳ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+