ಸರ್ಕಾರದ ಕಾಯ್ದೆಗಿಲ್ಲ ಕಿಮ್ಮತ್ತು ; ‘ಕಾಮೆಡ್-ಕೆ’ ಮತ್ತೆ ಕೋರ್ಟ್‌ಗೆ
ಸರ್ಕಾರದ ಕಾಯ್ದೆಗಿಲ್ಲ ಕಿಮ್ಮತ್ತು ; ‘ಕಾಮೆಡ್-ಕೆ’ ಮತ್ತೆ ಕೋರ್ಟ್‌ಗೆ
ಸಿಇಟಿ ಅನ್ವಯ ಸೀಟು ದೊರೆತವರಿಗೆ ಪ್ರವೇಶ ನೀಡಲು ಖಾಸಗಿ ಕಾಲೇಜುಗಳ ನಿರಾಕರಣೆ
ಸುಪ್ರಿಂಕೋರ್ಟ್ ಈ ಹಿಂದೆ ನಿಗದಿಪಡಿಸಿರುವ ಶೇ.50:50ರ ಪ್ರಮಾಣದಲ್ಲಿಯೇ ಸೀಟು ಹಂಚಿಕೆ ತೀರ್ಪು ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕಾಮೆಡ್-ಕೆ ಪುನಃ ನ್ಯಾಯಪೀಠದ ಮೊರೆ ಹೋಗಲು ನಿರ್ಧರಿಸಿದೆ ಎಂದು ಕಾಮೆಡ್-ಕೆ. ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ತಿಳಿಸಿದ್ದಾರೆ.
ಈ ನಡುವೆ ವೈದ್ಯ ಶಿಕ್ಷಣ ಕಾಲೇಜುಗಳು ನಿಗದಿತ ಅವಧಿಯಲ್ಲಿ ಪ್ರವೇಶ ಪ್ರಕ್ರಿಯೆ ಪೂರೈಸುವುದು ಅಸಾಧ್ಯವಾಗಿರುವ ಕಾರಣ, ಪ್ರವೇಶದ ಗಡುವನ್ನು ವಿಸ್ತರಿಸುವಂತೆ ಭಾರತೀಯ ವೈದ್ಯ ಶಿಕ್ಷಣ ಪರಿಷತ್‌ಗೆ ಮನವಿ ಸಲ್ಲಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೈಗಾರಿಕಾ ಸಚಿವ ಪಿಜಿಆರ್ ಸಿಂಧ್ಯಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕಂಗಾಲು : ಶೇ.75:25 ಪ್ರಮಾಣದಲ್ಲಿ ಪ್ರವೇಶ ಕಲ್ಪಿಸಲು ಸರ್ಕಾರ ಕಾಯ್ದೆ ತಂದಿದ್ದರೂ, ಪ್ರವೇಶ ಪ್ರಕ್ರಿಯೆ ಗೊಂದಲ ಮುಂದುವರೆದಿದೆ. ಸರ್ಕಾರದ ಸಿಇಟಿ ಅನ್ವಯ ಸೀಟು ದೊರೆತಿರುವ ಕೆಲವು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಖಾಸಗಿ ಕಾಲೇಜುಗಳು ನಿರಾಕರಿಸಿವೆ. ಅಲ್ಲದೆ, ಸರ್ಕಾರಿ ಸೀಟು ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಅಥವಾ ಸ್ಕಾಲರ್‌ಶಿಪ್ ನೀಡುವ ಬಗ್ಗೆ ನೂತನ ಕಾಯ್ದೆ ಏನನ್ನೂ ತಿಳಿಸಿಲ್ಲ . ಇದರಿಂದಾಗಿ ಉನ್ನತ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳ ಪಡಿಪಾಟಲು ಮುಂದುವರೆದಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications