ಕೊಲ್ಲೂರು ಮೂಕಾಂಬೆಗೆ ಶರಣೆಂದ ತಮಿಳ್ನಾಡು ಅಧಿನಾಯಕಿ ಜಯಾ

ಕೊಲ್ಲೂರು ಮೂಕಾಂಬೆಗೆ ಶರಣೆಂದ ತಮಿಳ್ನಾಡು ಅಧಿನಾಯಕಿ ಜಯಾ
ಚೆನ್ನೆ , ಕೊಯಂಬತ್ತೂರು ಹಾಗೂ ಸೇಲಂಗಳಿಂದ ಕೊಲ್ಲೂರಿಗೆ ಬಸ್ಸು

ಕೊಲ್ಲೂರು : ಉಡುಪಿ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಕೊಲ್ಲೂರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಶುಕ್ರವಾರ ಭೇಟಿ ನೀಡಿ, ಕೊಲ್ಲೂರು ಸಿರಿಮಾತೆ ಶ್ರೀ ಮೂಕಾಂಬಿಕೆಗೆ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದರು.

ಚೆನ್ನೈನಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಜಯಲಲಿತಾ ತಮ್ಮ ಗೆಳತಿ ಶಶಿಕಲಾ ಅವರೊಂದಿಗೆ ಶುಕ್ರವಾರ (ಜು.30) ಬೆಳಗ್ಗೆ ಆಗಮಿಸಿದರು. ಕೊಲ್ಲೂರಿನ ಮೂಕಾಂಬಿಕಾ ದೇಗುಲದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಜಯಲಲಿತಾ ಅವರನ್ನು ಸ್ವಾಗತಿಸಲಾಯಿತು.

ದರ್ಶನದ ನಂತರ ವಿಶೇಷ ಪೂಜೆ ಸಲ್ಲಿಸಿದ ಜಯಲಲಿತಾ, ಚಂಡಿಕಾಹೋಮದಲ್ಲಿ ಪಾಲ್ಗೊಂಡರು. ಶ್ರೀಕ್ಷೇತ್ರದಲ್ಲಿ ನಡೆಯುವ ಅನ್ನದಾನದ ಒಂದು ದಿನ ದ ಖರ್ಚು (30 ಸಾವಿರ ರು.) ಹಾಗೂ 1 ಟಿನ್‌ ಶುದ್ಧ ತುಪ್ಪವನ್ನು ಜಯಲಲಿತಾ ಅರ್ಪಿಸಿದರು.

ದೇಗುಲದ ಪ್ರದಕ್ಷಿಣೆ ಸಂದರ್ಭದಲ್ಲಿ , ಚೆನ್ನೆ , ಕೊಯಂಬತ್ತೂರು ಹಾಗೂ ಸೇಲಂಗಳಿಂದ ಕೊಲ್ಲೂರಿಗೆ ಬಸ್ಸುಗಳನ್ನು ಓಡಿಸಲು ತಮಳುನಾಡು ರಸ್ತೆ ಸಾರಿಗೆ ಸಂಸ್ಥೆಗೆ ಸೂಚಿಸುವಂತೆ ತಮಿಳುನಾಡು ಮುಖ್ಯಕಾರ್ಯದರ್ಶಿಗೆ ಜಯಲಲಿತಾ ಆದೇಶಿಸಿದರು.

ಭೇಟಿಯ ಸಂದರ್ಭದಲ್ಲಿ ಜಯಲಲಿತಾ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು . ಸುದ್ದಿಗಾರರು ಹಾಗೂ ಛಾಯಾಗ್ರಾಹಕರಿಗೆ ಮುಖ್ಯಮಂತ್ರಿಯವರ ಬಳಿ ಪ್ರವೇಶ ನಿರಾಕರಿಸಲಾಯಿತು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+