ಸುಪ್ರಸಿದ್ಧ ಯಾತ್ರಾಸ್ಥಳ ಇರ್ಪುವಿನ ರಾಮೇಶ್ವರ ದೇಗುಲದಲ್ಲಿ ಕಳ್ಳತನ
ಸುಪ್ರಸಿದ್ಧ ಯಾತ್ರಾಸ್ಥಳ ಇರ್ಪುವಿನ ರಾಮೇಶ್ವರ ದೇಗುಲದಲ್ಲಿ ಕಳ್ಳತನ
ಪಂಚಲೋಹ ಹಾಗೂ ಬೆಳ್ಳಿಯ ವಸ್ತುಗಳ ಅಪಹರಣ
ಇರ್ಪು ರಾಮೇಶ್ವರ ದೇಗುಲದಲ್ಲಿ ಜುಲೈ 26ರ ಸೋಮವಾರ ಕಳ್ಳತನ ನಡೆದಿದೆ. ಪಂಚಲೋಹದ ವಿಗ್ರಹಗಳು, ಬೆಳ್ಳಿಯ ಪ್ರಭಾವಳಿ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳಲು ಕದ್ದೊಯ್ದಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು , ಡಿಎಸ್ಪಿ ಅಶೋಕ್ ಅನ್ವೇಕರ್ ದೇಗುಲಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಲಕ್ಷ್ಣಣತೀರ್ಥ ನದಿಗೆ ಸನಿಹದಲ್ಲಿರುವ ಇರ್ಪು ರಾಮೇಶ್ವರ ದೇಗುಲ ಭಕ್ತರನ್ನು ಮಾತ್ರವಲ್ಲದೆ ತನ್ನ ಸುಂದರ ಪರಿಸರದಿಂದ ಸೌಂದರ್ಯೋಪಾಸಕರನ್ನೂ ಸೆಳೆಯುತ್ತಿದೆ. ಪ್ರತಿದಿನ ನೂರಾರು ಪ್ರವಾಸಿಗರು ಇರ್ಪುವಿಗೆ ಭೇಟಿ ನೀಡುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications