ಕರೀಂಲಾಲನಿಗೆ ನಕಲಿ ಪ್ರಮಾಣ ಪತ್ರ : ಸಿಬಿಐನಿಂದ ವೈದ್ಯರ ಬಂಧನ
ಕರೀಂಲಾಲನಿಗೆ ನಕಲಿ ಪ್ರಮಾಣ ಪತ್ರ : ಸಿಬಿಐನಿಂದ ವೈದ್ಯರ ಬಂಧನ
ಡಯಾಬಿಟಿಕ್ ಕ್ಲಿನಿಕ್ ಮುಖ್ಯಸ್ಥ ಡಾ.ಜ್ಞಾನೇಂದ್ರಪ್ಪ ಸಹ ಪ್ರಾಧ್ಯಾಪಕರೂ ಹೌದು
ವಿಕ್ಟೋರಿಯಾ ಆಸ್ಪತ್ರೆಯ ಡಾ.ಜ್ಞಾನೇಂದ್ರಪ್ಪ ಅವರನ್ನು ಈಮುನ್ನವೇ ಬಂಧಿಸಿದ್ದರೂ, ಅನಾರೋಗ್ಯದ ಕಾರಣ ಜ್ಞಾನೇಂದ್ರಪ್ಪ ಅವರನ್ನು ವಶಕ್ಕೆ ತೆಗೆದುಕೊಂಡಿರಲಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ. ಡಯಾಬಿಟಿಕ್ ಕ್ಲಿನಿಕ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜ್ಞಾನೇಂದ್ರಪ್ಪ ಸಹ ಪ್ರಾಧ್ಯಾಪಕರೂ ಹೌದು ಎಂದು ಸಿಬಿಐ ಹೇಳಿದೆ.
ಬಂಧಿತ ಜ್ಞಾನೇಂದ್ರಪ್ಪ ಅವರನ್ನು ಸಿಬಿಐ ಪ್ರಶ್ನಿಸುತ್ತಿದ್ದು , ತನಿಖೆ ಮುಂದುವರಿದಿದೆ. ಜಾಮೀನು ಪಡೆಯಲಿಕ್ಕಾಗಿ ಕರೀಂಲಾಲ ತೆಲಗಿಗೆ ನಕಲಿ ಪ್ರಮಾಣಪತ್ರ ನೀಡಿದ್ದರು ಎಂದು ಸಿಬಿಐ ಆರೋಪಿಸಿದೆ. ಇದೇ ಆರೋಪದ ಮೇರೆಗೆ ಡಾ.ಚನ್ನಕೇಶವ ಎನ್ನುವವರನ್ನೂ ಈಗಾಗಲೇ ಬಂಧಿಸಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications