‘ಗೆಳೆತನ ದಿನ’ ಕ್ಕೊಂದು ಪ್ರೀತಿ ರೂಪಕ
‘ಗೆಳೆತನ ದಿನ’ ಕ್ಕೊಂದು ಪ್ರೀತಿ ರೂಪಕ
ಪ್ರೀತಿಗೆ-ಗೆಳೆತನಕ್ಕೆ ಉಡುಗೊರೆಯ ಹಂಗು ಬೇಕಾ ? ಬೇಕಾಗಿಲ್ಲ ಎನ್ನುವ ಮುನ್ನ ಮೈತ್ರಿಯ ಮಧು ಜಿನುಗುವ ಈ ಬರಹ ಓದಿ.
- ಅನು
ಅದೊಂದು ದಿವ್ಯ ಅನುಭವ ಎನ್ನುತ್ತಾನೆ ಅನುಭವಿ. ಅದು ಹೊಂಗೆಯ ಮರದಂತೆ ತಂಪು ಎನ್ನುತ್ತಾನೆ ಮತ್ತೊಬ್ಬ ಫಲಾನುಭವಿ. ಗೆಳೆತನ ಆಲದ ಮರವಿದ್ದಂತೆ ಎನ್ನುತ್ತಾನೆ ಕವಿ. ಹೌದು, ಗೆಳೆತನವೆಂದರೆ ಇದೆಲ್ಲವೂ ಹೌದು, ಇವೆಲ್ಲವನ್ನು ಮೀರಿದ ಬಂಧವೂ ಹೌದು. ಕುಟುಂಬದೊಳಗಿನ ಸದಸ್ಯರಿಂದ ಸಿಗದ ನೆಮ್ಮದಿ, ನಿರುಮ್ಮಳತೆ ಗೆಳೆತನದಿಂದ ಸಿಗುವುದುಂಟು. ಅದಕ್ಕೆ ಹೇಳುವುದು ಒಬ್ಬ ನಿಜವಾದ ಗೆಳೆಯನಿದ್ದರೆ ಜಗತ್ತನ್ನೇ ಗೆಲ್ಲಬಹುದೆಂದು !
ನಿಜ, ಅಂಥ ಅದ್ಭುತ ಗೆಳೆಯರು ಎಲ್ಲರಿಗೂ ಸಿಗುವುದಿಲ್ಲ . ಒಳ್ಳೆಯ ಗೆಳೆತನ ದೊರಕಲಿಕ್ಕೂ ಅದೃಷ್ಟ ಬೇಕು. ಅಂಥ ಒಳ್ಳೆಯ ಗೆಳೆಯರು ನಿಮಗಿದ್ದಾರಾ ? ಹೌದಾ, ಅಭಿನಂದನೆಗಳು.
ಕರ್ಣ- ದುರ್ಯೋಧನ, ಕರ್ಣ-ಭಾನುಮತಿ, ಚಂದ್ರಗುಪ್ತ-ಚಾಣಕ್ಯ, ಅರ್ಜುನ-ಕೃಷ್ಣ , ಒಂದೇ ಎರಡೇ. ಇತಿಹಾಸ ಪುರಾಣಗಳ ಪುಟದ ತುಂಬಾ ಪ್ರಾಣಗೆಳೆಯರ ಚಿತ್ರಗಳಿರುವಂತೆಯೇ ಮೀರ್‌ಸಾದಕ್‌ಗಳಂಥ ಕಪ್ಪುಚುಕ್ಕೆಗಳೂ ಉಂಟು. ಇರಲಿ ಬಿಡಿ, ನಾವು ನಮ್ಮ ಗೆಳೆಯರ ಬಗ್ಗೆ ಮಾತಾಡೋಣ.
ಒಳ್ಳೆಯ ಗೆಳೆಯರಿದ್ದಾರೋ ಇಲ್ಲವೋ, ಗೆಳೆಯರಂತೂ ಇದ್ದಾರಲ್ಲ ! ಅಷ್ಟೂ ಸಾಕು ಜೀವದ ನೆಮ್ಮದಿಗೆ. ಅದು ಸರಿ, ಗೆಳೆಯರನ್ನು ಭೇಟಿ ಮಾಡಿ ಯಾವ ಕಾಲವಾಯಿತು? ಜೊತೆಗೆ ಕೂತು ಹರಟಿ ಯಾವ ಕಾಲವಾಯಿತು? ಇಷ್ಟಪಾತ್ರರು ಹತ್ತಿರದಲ್ಲಿದ್ದಾರೋ, ಬೇರೆ ಊರಿನಲ್ಲಿದ್ದಾರೋ ?
ಆ್ಞಂ, ಗೆಳೆಯರ ನೆನಪಿಸಿಕೊಳ್ಳಲಿಕ್ಕೆ , ಗೆಳೆತನವ ನವೀಕರಿಸಿಕೊಳ್ಳಲಿಕ್ಕೆ ಒಂದು ಸಂದರ್ಭ ಬಂದಿದೆ. ಆಗಸ್ಟ್ 1 ಗೆಳೆತನದ ದಿನ (Friendship Day). ಅಂದು ಎಲ್ಲ ಜಂಜಡಗಳ ಮರೆತುಬಿಡಿ : ಆ ಸಮಯ ಗೆಳೆಯರಿಗೆ ಮೀಸಲಿಡಿ. ಭೇಟಿಯಾಗಲು ಸಾಧ್ಯವಾಗದಾ? ಫೋನ್ ಮಾಡಿ, ಇ-ಮೇಲ್ ಕಳಿಸಿ. ಉಡುಗೊರೆ ಕಳಿಸಿದರೆ ಇನ್ನೂ ಚೆನ್ನ ! ಹಬ್ಬಲಿ ಸ್ನೇಹದ ರಸಬಳ್ಳಿ.
ದ
ಟ್ಸ್‌ಕನ್ನಡ ಹಾಗೂ ಸ್ನೇಹಿತರ ಅವ್ಯಕ್ತ ಪ್ರೀತಿಗೊಂದು ಉಡುಗೊರೆಯ ಅಭಿವ್ಯಕ್ತಿ ಕಲ್ಪಿಸಲು ವೇದಿಕೆ ರೂಪಿಸಿದೆ. ಪ್ರೀತಿಗೆ-ಗೆಳೆತನಕ್ಕೆ ಉಡುಗೊರೆಯ ಹಂಗು ಬೇಕಾ ? ಖಂಡಿತಾ ಬೇಕಾಗಿಲ್ಲ . ಆದರೆ, ಉಡುಗೊರೆಯನ್ನು ಹಂಗು ಎಂದು ಭಾವಿಸುವುದಾದರೂ ಏಕೆ ? ನೀವು ಕಳುಹಿಸಿದ ಉಡುಗೊರೆಗೆ ಬೆಲೆ ಇರಬಹುದು ; ಉಡುಗೊರೆಯ ಕಂಡ ಗೆಳೆಯ/ಗೆಳತಿಯ ಮುಖದಲ್ಲಿ ನಗು ಅರಳುತ್ತದಲ್ಲ , ಎದೆಯಲ್ಲೊಂದು ಪುಳಕದ ಚಿಲುಮೆ ಊಟೆಯಾಗುತ್ತದಲ್ಲ - ಅದಕ್ಕೇನು ಬೆಲೆ ಕಟ್ಟುತ್ತೀರಿ ? ಅಂಥ ಮೌಲ್ಯಾತೀತ ಭಾವನೆಗಳಿಗೆ ಕಾರಣವಾಗುವ ಉಡುಗೊರೆಯನ್ನು ನೀವು ಕಳಿಸುವಿರಿ ತಾನೆ ?
ಅಂದಹಾಗೆ, ಗೆಳೆಯರೆಂದರೆ ದೂರದವರೇ ಅಲ್ಲ . ಗಂಡ-ಹೆಂಡತಿ ಕೂಡ ಒಳ್ಳೆಯ ಗೆಳೆಯರಾಗಬಲ್ಲರು. ಅಪ್ಪ /ಅಮ್ಮನಲ್ಲಿ ಗೆಳೆಯರಿಲ್ಲವಾ ?
ನಿಮಗೆಲ್ಲ ಗೆಳೆತನ ದಿನದ ಶುಭಾಶಯಗಳು. ಸ್ನೇಹದ ರಸಬಳ್ಳಿ ಹಬ್ಬಲಿ, ಜಗವ ತಬ್ಬಲಿ.
ಮುಖಪುಟ / ವಾರ್ತೆಗಳು












Click it and Unblock the Notifications